ದೇವನಹಳ್ಳಿ: ಸಮಾಜದ ಎಲ್ಲಾ ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯದವರಿಗೆ ಉಚಿತ ಶಿಕ್ಷಣ, ವಸತಿ, ಅನ್ನ ನೀಡಿದ ತ್ರಿವಿದ ದಾಸೋಹಿ ಶ್ರೀ ಸಿದ್ದಗಂಗಾ ಸ್ವಾಮಿಗಳು ಇಂತಹ ಮಹಾನ್ ವ್ಯಕ್ತಿಯ ಸಾಧನೆಯನ್ನು ವಿಶ್ವದಲ್ಲಿ ಯಾರು ಮಾಡಲು ಸಾಧ್ಯವಿಲ್ಲ ಅಂತಹ ನಡೆದಾಡುವ ದೇವರು ನಮ್ಮನ್ನು ಅಗಲಿ 6 ವರ್ಷಗಳಾದರೂ ಅವರ ಕಾರ್ಯಗಳು ಅವರ ಬದುಕು ತತ್ವಾದರ್ಶಗಳು ನಮಗೆ ನಿತ್ಯ ದಾರಿದೀಪವಾಗಿದೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸ್ಮರಿಸಿದರು.
ಅವರು ಪಟ್ಟಣದ ಶ್ರೀ ಶಿವಕುಮಾರಸ್ವಾಮಿ ವೃತ್ತದಲ್ಲಿ ವೀರಶೈವ ಲಿಂಗಾಯಿತ ಸಮಾಜದಿಂದ ಆಯೋಜಿಸಲಾಗಿದ್ದ ಡಾ|| ಶಿವಕುಮಾರಸ್ವಾಮಿಗಳವರ 6ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಯಾವುದೇ ಜಾತಿ, ಧರ್ಮ, ವರ್ಗಕ್ಕೆ ಸೀಮಿತವಾಗದೆ ಸರ್ವರಿಗೂ ಸಮಬಾಳು ಸಮಪಾಲು ಎಂಬಂತೆ ಎಲ್ಲರಿಗೂ ಶಿಕ್ಷಣ ವಸತಿ, ಅನ್ನದಾಸೋಹ ಕಲ್ಪಿಸಿದ ಮಾಹಾನ್ ಚೇತನ ಡಾ|| ಶ್ರೀ ಶಿವಕುಮಾರಸ್ವಾಮಿಗಳು ಅಂತಹ ಮಹಾತ್ಮರು ಮತ್ತೆ ಮತ್ತೆ ಹುಟ್ಟಿ ಬರಲಿಎಂದರು.
ವೀರಶೈವ ಲಿಂಗಾಯಿತ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್ ರಮೇಶ್ ಶ್ರೀಗಳು ಅನೇಕ ಬಡ ಮಕ್ಕಳಿಗೆ ದಾರಿದೀಪವಾಗಿದ್ದರು, ಮಠದಲ್ಲಿ ಶಿಕ್ಷಣ ಪಡೆದ ಅದೇಷ್ಟೋ ವಿದ್ಯಾರ್ಥಿಗಳು ಇಂದು ವಿವಿಧ ಇಲಾಖೆಗಳಲ್ಲಿ ಉನ್ನತ ಉದ್ದೆಗಳಲ್ಲಿದ್ದಾರೆ. ಅವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರಲಿಲ್ಲ. ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ವ್ಯಕ್ತಿಯಾಗಿ ಬದುಕಬಹುದು, ಶ್ರೀಗಳಿಗೂ ನಮಗೂ ಸುಮಾರು ವರ್ಷಗಳಿಂದಲೂ ಒಡನಾಟವಿತ್ತು, ನಾವು ಆಹ್ವಾನ ನೀಡಿದಾಗಲೆಲ್ಲಾ ಬಂದು ಪಾದಪೂಜೆ ನೆರವೇರಿಸಿ ಅದರಿಂದ ಬಂದ ಕಾಣಿಕೆಯನ್ನು ಮಠದ ಮಕ್ಕಳ ದಾಸೋಹಕ್ಕೆ ಉಪಯೋಗಿಸುತ್ತಿದ್ದ ಮಹಾತ್ಮರು ಎಂದರು.
ಇದೇ ವೇಳೆ ಸ್ವಾಮೀಜಿಗಳ ಹೆಸರಿನಲ್ಲಿ ಅನ್ನದಾನ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಎನ್.ರಘು, ಡಿಆರ್.ಬಾಲರಾಜು, ಜಿ.ಎ.ರವೀಂದ್ರ, ಪುರಸಭಾ ಸದಸ್ಯ ವೀರಶೈವ ಲಿಂಗಾಯಿತ ಸಂಘದ ತಾಲುಕು ಖಜಾಂಚಿ ಎಸ್.ನಾಗೇಶ್ , ವೀರಶೈವ ಮಹಾಸಭಾದ ರಾಜ್ಯ ಸಮಿತಿ ಸದಸ್ಯ ವಿರೂಪಾಕ್ಷಯ್ಯ, ಜಿಲ್ಲಾ ಕಾರ್ಯದರ್ಶಿ ಶಾಂತಮೂರ್ತಿ, ಜಿಲ್ಲಾ ನಿದೆರ್ಶಕರಾದ ಅಶ್ವಿನಿ, ಪುಷ್ಪಾವತಮ್ಮ, ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಂiÀiಕುಮಾರ್, ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪ, ತಾಲುಕು ಮಹಿಳಾ ಅಧ್ಯಕ್ಷೆ ಶಶಿಕಲಾ, ಮಾಜಿ ಅಧ್ಯಕ್ಷೆ ಉಷಾ, ಕಾಂತರಾಜು, ಸದಾಶಿವಪ್ಪ, ಶಿವಕುಮಾರ್, ಬಿ. ಸುನಂದ, ರಾಜೇಶ್ವರಿ, ಭ್ರÀಮರಾಂಬಿಕ, ಗೀತಹಾದಿಮನಿ, ಗಿರೀಶ್, ಬಿದಲೂರು ಶಿವಪ್ರಸಾದ, ಚಿದಾನಂದ ವಿವೇಕ್, ಸಮಾಜದ ಅನೇಕ ಮುಖಂಡರು ಇದ್ದರು.