ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಸಂಪುಟವನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ಸರ್ಕಾರದ ವಿರುದ್ಧ ಸುಳ್ಳು ಅರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಒಂದೇ ಒಂದು ಅರೋಪವನ್ನು ಪ್ರೂವ್ ಮಾಡಿಲ್ಲ, ಬಿಟ್ ಕಾಯಿನ್ ಹಗರಣ, 40 ಪರ್ಸೆಂಟ್ ಕಮೀಶನ್, ಪಿಎಸ್ಐ ನೇಮಕಾತಿ ಹಗರಣಗಳು ನಡೆದಿವೆ ಅಂತ ಜನರಿಗೆ ಸುಳ್ಳು ಹೇಳಿ ವೋಟು ಗಿಟ್ಟಿಸಿದರೇ ಹೊರತು, ತನಿಖೆಗಳನ್ನು ನಡೆಸಿ ಸತ್ಯಾಂಶವನ್ನು ಹೊರತೆಗೆಯುವುದು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.