ಹುಬ್ಬಳ್ಳಿ: ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಸಿಎಂ ಆಪ್ತ ಸಲಹೆಗಾರ ಬಿ.ಆರ್.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಐದು ವರ್ಷ ಇರ್ತಾರೋ ಇರಲ್ವೋ ಗೊತ್ತಿಲ್ಲ. ಆದರೆ, ಅವರು ಐದು ವರ್ಷ ಇರಬೇಕು ಅಂತಾ ಬಯಸುತ್ತೇವೆ. ಆದರೆ ಹೈಕಮಾಂಡ್ ಏನು ನಿರ್ಧಾರ ಮಾಡುತ್ತೆ ಗೊತ್ತಿಲ್ಲ.
ಹೈಕಮಾಂಡ್ ಬೇರೆ ನಿರ್ಧಾರ ತೆಗೆದುಕೊಂಡರೆ ನಾವೇನು ಮಾಡುವುದಕ್ಕೆ ಆಗುತ್ತೆ? ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಇನ್ನೂ ದೊಡ್ಡ ಜವಾಬ್ದಾರಿ ನೀಡಬಹುದು.ಆದರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕು ಅಂತಾ ಯಾವ ಶಾಸಕರ ಮನಸ್ಸಿನಲ್ಲಿ ಇಲ್ಲ ಎಂದು ತಿಳಿಸಿದರು.
ದೊಡ್ಡ ಕನಸನ್ನು ಕಂಡು ಬಡವರ ಪರವಾಗಿ ಕಾರ್ಯಕ್ರಮ ಹಮ್ಮಿಕೊಂಡಾಗ ಭೌತಿಕ ಅಭಿವೃದ್ಧಿಗೆ ಹೊಡೆತ ಬೀಳುತ್ತೆ.
ಈ ಬಾರಿಯ ಬಜೆಟ್ನಲ್ಲಿ ಗ್ಯಾರಂಟಿಯಿಂದ ಆರ್ಥಿಕ ಹೊರೆ ಆಗದಂತೆ ಹೊಸ ಆರ್ಥಿಕ ನೀತಿ ಸಿಎಂ ನೀಡ್ತಾರೆ. ನಮಗೆ ಮೊದಲೇ ಗೊತ್ತಿತ್ತು. ಇಷ್ಟು ಖರ್ಚು ಆಗುತ್ತೆ ಅಂತಾ. ಆರ್ಥಿಕ ಸಮಸ್ಯೆ ನಮಗೆ ಮಾತ್ರವಲ್ಲಾ ಎಲ್ಲಾ ರಾಜ್ಯಗಳಿಗಿದೆ. ಸಮಸ್ಯೆ ಆಗುತ್ತಿದೆ ಸ್ವಲ್ಪ ಹೊರೆ ಆಗುತ್ತೆ. ದೊಡ್ಡ ಸಮಸ್ಯೆಗೆ ಕೈ ಹಾಕಿದಾಗ ಸ್ವಲ್ಪ ಸಮಸ್ಯೆ ಉದ್ಭವ ಆಗುತ್ತೆ. ಕಲ್ಯಾಣ ರಾಜ್ಯದ ಪರಿಕಲ್ಪನೆ ಕಾಣುತ್ತಿದ್ದೇವೆ.
ಎಲ್ಲರಿಗೂ ಸಮಪಾಲು ಸಮಬಾಳು. ಐದು ಗ್ಯಾರಂಟಿಗಳು ಬಹಳಷ್ಟು ಯಶಸ್ವಿಯಾಗಿ ಅನುಷ್ಠಾನ ಆಗುತ್ತಿವೆ. ಇದರಿಂದ ಬಹಳಷ್ಟು ರಾಜಕೀಯ ಲಾಭ ಆಗುತ್ತಿದೆ. ನಮ್ಮ ಕಾಪಿಯನ್ನೇ ಮೋದಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ನಿಲ್ಲುವುದಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಿಪಿಎಲ್ ಕಾರ್ಡ್ ವಿವಾದ ಬಿಜೆಪಿ ಹುಟ್ಟಿಸಿದ ಭಯ. ಆದರೆ ಯಾವುದೇ ಗ್ಯಾರಂಟಿ ನಿಲ್ಲೋದಿಲ್ಲಾ. ಇದನ್ನು ಪರಿಹಾರ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.