ಉಡುಪಿ: ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಸುಲಭವಾಗಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಹುದ್ದೆಯನ್ನು ಬಿಟ್ಟು ಕೊಡೋದಿಲ್ಲ, ಹಾಗಾಗಿ ಹುದ್ದೆಯನ್ನು ಒದ್ದು ಕಿತ್ತುಕೊಳ್ಳಬೇಕಾದ ಅನಿವಾರ್ಯತೆ ಶಿವಕುಮಾರ್ ಅವರಿಗಿದೆ ಎಂದು ಬಿಜೆಪಿ ಶಾಸಕ ಸುನೀಲ ಕುಮಾರ್ ಹೇಳಿದರು. ಹಿಂದೆ ಎಸ್ ಎಂ ಕೃಷ್ಣ ಅವರ ಸಚಿವ ಸಂಪುಟದಲ್ಲಿ ಅವರು ಒದ್ದು ಸಚಿವ ಸ್ಥಾನ ಪಡೆದಿದ್ದರು ಈಗಲೂ ಹಾಗೆ ಮಾಡಲೇಬೇಕಾದ ಅವಶ್ಯತಕೆಯಿದೆ ಎಂದು ಶಾಸಕ ಹೇಳಿದರು. ಇದೊಳ್ಳೇ ಕತೆಯಾಯ್ತು ಮಾರಾಯ್ರೇ, ಸಿಎಂ ಕುರ್ಚಿಯನ್ನು ಶಿವಕುಮಾರ್ ಒದ್ದು ಪಡೆಯುತ್ತಾರೋ ಅಥವಾ ಬೇರೆ ರೀತಿಯಿಂದ ಪಡೆಯುತ್ತಾರೋ ಅದು ಅವರ ತಲೆಬಿಸಿ. ಸುನೀಲ ಕುಮಾರ್ ಮತ್ತು ಅರ್ ಅಶೋಕ ಯಾಕೆ ಈ ವಿಷಯದಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ!