ಬೆಂಗಳೂರು: ಚಂದ್ರ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನಿನಲ್ಲಿ ನಿನ್ನೆ ರಾತ್ರಿ 7.30 ರ ಸುಮಾರಿಗೆ ಸಿನಿಮಾ ತೆಗೆಯುವ ಸಂಬಂಧ ಗಲಾಟೆ ಆಗಿ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದಿದೆ.
“ದೇವಯಾನಿ” ಎಂಬ ಸಿನಿಮಾ ತೆಗೆಯಲು ಭರತ್ ಡೈರೆಕ್ಟರ್ ಮತ್ತು ತಾಂಡವೇಶ್ವರ ನಟ ಇವರ ನಡುವೆ ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟಂತೆ ಗಲಾಟೆ ಸಂಭವಿಸಿ ನಟ ತಾಂಡವೇಶ್ವರ ತನ್ನ ಬಳಿ ಇದ್ದ ಡಿ ಬಿ ಬಿ ಎಲ್ ಗನ್ನಿನಲ್ಲಿ ಗಾಳಿಗೆ ಗುಂಡು ಹಾರಿಸಿರುತ್ತಾನೆ.
ಸುಮಾರು 6 ಲಕ್ಷ ಹಣ ಇಲ್ಲಿಯ ತನಕ ವ್ಯಯವಾಗಿ ಇನ್ನು ಸಿನಿಮಾ ಶೂಟಿಂಗ್ ಮುಗಿಯದೇ ಇರುವುದರಿಂದ ಹಾಗೂ ಸಹ ನಟರೊಂದಿಗೆ ಹಣದ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಗಲಾಟೆ ಆಗಿ ಗಾಳಿಯಲ್ಲಿ ಗುಂಡು ಹಾರಿಸಿರುತ್ತಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿರುತ್ತಾರೆ. ಈ ಸಂಬಂಧ ನಟ ತಾಂಡವೇಶ್ವರರನ್ನು ಬಂಧಿಸಿ ತನಿಖೆ ಮುಂದುವರಿಸಿರುತ್ತಾರೆ.