ಬೆಂಗಳೂರು: ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿ ರಾತ್ರಿಯೆಲ್ಲಾ ಠಾಣೆಯಿಂದ ಠಾಣೆಗೆ ಸುತ್ತಾಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.ಐಜಿಪಿ ವಿಕಾಸ್ ಕುಮಾರ್ ಅವರು ಖಾನಪುರ ಠಾಣೆಯ ಸಿಪಿಐ ಮಂಜುನಾಥ್ ನಾಯ್ಕ್ ಎಂಬುವರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಡಿ. 19ರಂದು ಸಿ.ಟಿ.ರವಿಯವರನ್ನು ಸುವರ್ಣಸೌಧದಲ್ಲಿ ವಶಕ್ಕೆ ಪಡೆದು ಮೊದಲಿಗೆ ಹಿರೇಬಾಗೇವಾಡಿ ಠಾಣೆಗೆ ಕರೆತಂದು ನಂತರ ಅವರನ್ನು ಖಾನಪುರ ಠಾಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿಗೆ ಸಿ.ಟಿ. ರವಿ ಅವರನ್ನು ಕಾಣಲು ಬಿಜೆಪಿಯ ಮುಖಂಡರು ಬಂದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪೊಲೀಸರ ವಶದಲ್ಲಿದ್ದ ಸಿ.ಟಿ.ರವಿಯವರನ್ನು ಮಾತನಾಡಿಸಲು ಅವಕಾಶ ಕಲ್ಪಿಸಲಾಗಿತ್ತು. ನಂತರ ಭದ್ರತೆ ದೃಷ್ಟಿಯಿಂದ ಸಿ.ಟಿ.ರವಿಯವರನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಸುತ್ತಾಡಿಸಲಾಗಿತ್ತು. ಇದೀಗ ಯಾವ ಕಾರಣಕ್ಕಾಗಿ ಸಿ.ಪಿ.ಐ ಮಂಜನಾಥ್ ನಾಯ್ಕ್ ಅವರನ್ನು ಅಮಾನತು ಪಡಿಸಿರುವುದು ಯಾವ ವಿಷಯಕ್ಕೆ ಎನ್ನುವುದು ಚರ್ಚಾ ವಿಷಯವಾಗಿದೆ.
ರಾತ್ರಿಯೆಲ್ಲಾ ಸುತ್ತಾಡಿಸಿದ್ದಕ್ಕೆ ಅಥವಾ ಬಿಜೆಪಿ ಮುಖಂಡರು ರವಿ ಅವರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೂ ಎಂಬುದು ಚರ್ಚೆಯ ವಿಷಯವಾಗಿದೆ.ಖಾನಪುರ ಠಾಣೆಗೆ ರವಿ ಅವರನ್ನು ರವಿಯವರನ್ನು ಕರೆತಂದ ವೇಳೆ ಪೊಲೀಸ ಆಯುಕ್ತ ಯಡಮಾರ್ಟಿನ್ ಎಸ್ಪಿ ಅವರು ಸಹ ಹಾಜರಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಸಿಪಿಐ ಮಂಜುನಾಥ್ ನಾಯ್ಕ್ ಅವರನ್ನು ಅಮಾನತುಗೊಳಿಸಿರುವ ಘಟನೆ ಖಂಡಿಸಿ ನಾಳೆ ಖಾನಪುರ ಬಂದ್ಗೆ ಕರೆ ನೀಡಲಾಗಿದೆ ಎಂದು ಹೇಳಲಾಗಿದೆ.