ಕನಕಪುರ: ಗ್ಯಾಸ್ ಸಿಲಿಂಡರ್ ಗೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಟಿಎಪಿಸಿಎಂಎಸ್ ನಿರ್ದೇಶಕರು ಸದಸ್ಯರು ಮತ್ತು ಸಿಬ್ಬಂದಿಗೆ ಏಕವಚನ ಪದ ಬಳಕೆ ಮಾಡಿದ ಷೇರುದಾರ ಸದಸ್ಯನಿಗೆ ಮಾಜಿ ಅಧ್ಯಕ್ಷರು, ಸದಸ್ಯರುಗಳು ತರಾಟೆಗೆ ತೆಗೆದುಕೊಂಡ ಘಟನೆಗೆ ಟಿಎಪಿಸಿಎಂಎಸ್ ವಾರ್ಷಿಕ ಸಭೆ ಸಾಕ್ಷಿಯಾಯಿತು.
ರೈಸ್ ಮಿಲ್ ಬಳಿ ಇರುವ ಬಿಎಂ ಪಾರ್ಟಿ ಹಾಲ್ ನಲ್ಲಿ ನಡೆದ ಟಿಎಪಿಸಿಎಂಎಸ್ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳ ಮೇಲೆ ನಡೆದ ಚರ್ಚೆಯಲ್ಲಿ ಸದಸ್ಯ ಕೃಷ್ಣ ಮಾತನಾಡಿ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಮಾಡುವ ಸಿಬ್ಬಂದಿ ಗಳು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡು ತ್ತಿದ್ದಾರೆ ಅದನ್ನು ಕೇಳಲು ಕಚೇರಿಗೆ ಹೋದರೆ ಸಿಬ್ಬಂದಿ ಗಳನ್ನು ಬಿಟ್ಟು ಗಲಾಟೆ ಮಾಡಿಸುತ್ತಾರೆ ಸಿಲಿಂಡರ್ ಗೆ ಹೆಚ್ಚು ಹಣ ವಸೂಲಿ ಬಗ್ಗೆ ದೂರು ನೀಡಿ ಕೇಂದ್ರ ಕಚೇರಿ ಯಿಂದ ನೋಟಿಸ್ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಏರು ದ್ವನಿಯಲ್ಲಿ ಮಾತನಾಡಿದರು ಸ್ಪಷ್ಟೀಕರಣ ನೀಡಲು ಮುಂದಾದ ಸಂಘದ ಸಿಬ್ಬಂದಿಗೆ ಏಕವಚನದಲ್ಲಿ ಮಾತನಾಡಿ ತಾಳ್ಮೆಯಿಂದ ವರ್ತಿಸುವಂತೆ ತಿಳಿ ಹೇಳಿದ ಮಾಜಿ ಅಧ್ಯಕ್ಷರು ಹ5 ಸದಸ್ಯರ ವಿರುದ್ಧವು ಹರಿಹಾಯ್ದರು.
ಸದಸ್ಯ ಕೃಷ್ಣ ಅವರ ವರ್ತನೆಗೆ ಬೇಸತ್ತ ನಿರ್ದೇಶಕರುಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಏಕವಚನದಲ್ಲಿ ಮಾತನಾಡಿದ ಸದಸ್ಯ ಕೃಷ್ಣನನ್ನು ತರಾಟೆಗೆ ತೆಗೆದು ಕೊಂಡು ಪ್ರತಿ ಸಭೆಯಲ್ಲೂ ಇದೇ ರೀತಿ ವರ್ತಿಸಿ ಸಭೆಯ ಗೌರವ ಹಾಳು ಮಾಡುತ್ತಿದ್ದಾನೆ ಈತನ ಸದಸ್ಯತ್ವವನ್ನು ರದ್ದು ಮಾಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡರು.
ಚಿಕ್ಕಬೆಟ್ಟಹಳ್ಳಿಯ ಕೆಂಪೇಗೌಡ ಮಾತನಾಡಿ 805 ರೂ ಬದಲು 920 ರೂಪಾಯಿವರೆಗೂ ವಸೂಲಿ ಮಾಡುತ್ತಿದ್ದು ಸಿಲಿಂಡರ್ ಬುಕ್ ಮಾಡಿ ಒಂದು ವಾರ ಕಳೆದರೂನಮ್ಮ ಗ್ರಾಮಕ್ಕೆ ತಂದುಕೊಡುವುದಿಲ್ಲ ವಿಳಂಬ ಮಾಡುತ್ತಾರೆ ಕಚೇರಿಗೆ ಬಂದು ನಾವೇ ಸಿಲಿಂಡರ್ ತೆಗೆದುಕೊಂಡು ಹೋಗಬೇಕು ನಮಗೆ ತುಂಬಾ ತೊಂದರೆ ಆಗುತ್ತಿದೆ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡಿ ಹೆಚ್ಚು ಹಣ ವಸೂಲಿಗೆ ಕಡಿವಾಣ ಹಾಕಿ ಎಂದು ಮನವಿ ಮಾಡಿದರು.
ಸದಸ್ಯ ನಾಗರಾಜು ಮಾತನಾಡಿ ಹೊಸ ಷೇರು ಕೊಡು ವಂತೆ ಕಳೆದೆರಡು ವರ್ಷಗಳಿಂದ ಮನವಿ ಮಾಡಿದರು ಸಹ ಆಡಳಿತ ಮಂಡಳಿ ಈ ವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಇನ್ನು ಎಷ್ಟು ವರ್ಷ ಬೇಕು ನನ್ನ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರ ಕೊಡಬೇಕು ಆದರೆ ಸಂಘದ ಮಾಜಿ ಅಧ್ಯಕ್ಷರು, ಸದಸ್ಯರುಗಳೇ ನಾನು ಮಾತನಾಡುವಾಗ ಮಧ್ಯ ಪ್ರವೇಶ ಮಾಡಿ ಚರ್ಚೆಯನ್ನು ಮೊಟಕು ಗೊಳಿಸುತ್ತಾರೆ ಎಂದು ಅಸಮದಾನ ವ್ಯಕ್ತ ಪಡಿಸಿದರು.
ಕೆಲ ಸದಸ್ಯರು ಮಾತನಾಡಿ ನಿರ್ದೇಶಕರ ಸಭೆಯಲ್ಲಿ ಭಾಗವಹಿಸಿದ ಪ್ರತಿ ನಿರ್ದೇಶಕರು 3000 ಸಿಟ್ಟಿಂಗ್ ಚಾರ್ಜ್ ಪಡೆಯುತ್ತಿದ್ದಾರೆ ವರ್ಷದಲ್ಲಿ 11 ಸಭೆಗಳನ್ನು ಮಾಡಿದ್ದೀರಿ ಸಭೆಗಳಿಗೆ ಲಕ್ಷಾಂತರ ಖರ್ಚು ಮಾಡಿದ್ದೀರಿ ನಾವು ಕೆಲಸ ಕಾರ್ಯ ಬಿಟ್ಟು ಸಭೆಗೆ ಬಂದಿದ್ದೇವೆ ನಮಗೆ ಎಷ್ಟು ಕೊಡ್ತೀರಿ ಎಂದು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.
ಸದಸ್ಯ ನಟರಾಜು ಮಾತನಾಡಿ ಸಂಘವು ಪ್ರಾರಂಭ ಗೊಂಡು 75 ವರ್ಷ ಕಳೆದಿದೆ ವಿಶೇಷವಾಗಿ ಸಭೆ ಮಾಡಿ ಡೈಮಂಡ್ ಜುಬ್ಲಿ ಆಚರಿಸಬೇಕಾಗಿತ್ತು ಆದರೆ ಸರಳವಾಗಿ ಸಭೆ ಮಾಡುತ್ತಿದ್ದೀರಿ ಪುಸ್ತಕದಲ್ಲೂ 75 ವರ್ಷ ಪೂರೈಸಿ ರುವ ಬಗ್ಗೆ ಎಲ್ಲೂ ಉಲ್ಲೇಖ ಮಾಡದಿರುವುದು ಅತ್ಯಂತ ಶೋಚನೀಯ ನಮಗೆ ಬೇಸರ ತರಿಸಿದೆ ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದರು, ನಮ್ಮಿಂದ ತಪ್ಪಾಗಿದೆ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆಯನ್ನು ವಹಿಸಲಾಗುವುದು ನಿರ್ದೇಶಕ ತಮ್ಮಣ್ಣ ಗೌಡ ಸಭೆಯ ಕ್ಷಮೆಯಾಚಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಕಾಳೇಗೌಡ ಮಾತನಾಡಿ ಸಂಘವು ಕಳೆದ 23-24ನೇ ಸಾಲಿನಲ್ಲಿ 46 ಲಕ್ಷ ಲಾಭಾಂಶ ದಾಖಲಿಸಿದೆ ಸಂಘವು ಸದ್ಯದ ಪರಿಸ್ಥಿತಿ ಯಲ್ಲಿ ನಷ್ಟದಲ್ಲಿದ್ದು ಸಂಘದ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರು ಸಹಕಾರ ನೀಡುವಂತೆ ಮನವಿ ಮಾಡಿದರು.ಸಭೆಯಲ್ಲಿ ನಿರ್ದೇಶಕ ಚಂದ್ರಶೇಖರ್, ಎಸ್.ಮಹೇಶ್, ನಾಗಯ್ಯ, ರಾಜೇಂದ್ರ, ದೇವರಾಜು, ಶ್ರೀನಿವಾಸ್, ಕೈಲಾಸ ಮೂರ್ತಿ, ಮೊಹಮ್ಮದ್ ಎಕ್ಬಾಲ್, ಮಂಗಳಮ್ಮ, ವಸಂತ, ನಾಗೇಶ್, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಆಶಾ ಹಾಗೂ ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಸಭೆ ಯಲ್ಲಿ ಉಪಸ್ಥಿತರಿದ್ದರು.