ಬೆಂಗಳೂರು: ನಿನ್ನೆ ರಾತ್ರಿ ಗ್ಯಾಸ್ ಸಿಲಿಂಡರ್ ರೀಫಿಲ್ ಮಾಡುವಾಗ ಬ್ಲಾಸ್ಟ್ ಆಗಿ ಇಬ್ಬರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟದಲ್ಲಿ ಜರುಗಿದೆ.
ಅನ್ವರ್ ಎಂಬುವರು ಬಾಡಿಗೆ ಮನೆ ಪಡೆದು ತಮ್ಮ ಸಂಬಂಧಿಕರುಗಳಾದ ಸೈಯದ್ ರೆಯಾನ್ ಮತ್ತು ಸೈಯದ್ ಆರ್ಯನ್ ಎಂಬುವರನ್ನು ಗ್ಯಾಸ್ ರೀಫಿಲ್ ಮಾಡಲು ನಿಯೋಜಿಸಿ ಹೊರಗೆ ಹೋಗಿದ್ದನು. ಈ ಇಬ್ಬರು ಗ್ಯಾಸ್ ರೀಫಿಲ್ ಮಾಡುವ ಸಮಯದಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ದೇಹಕ್ಕೆ ತೀವ್ರತರವಾದ ಗಾಯಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ.
ಮತ್ತೊಬ್ಬ ಹ್ಯಾಂಡಿಕ್ಯಾಪ್ ತಬರೈಝ ಎಂಬಾತನ್ನು ತಲೆಮರಿಸಿಕೊಂಡಿರುತ್ತಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿರುತ್ತಾರೆ.