ಹುಣಸಗಿ: ರಾಜ್ಯದ ಉನ್ನತ ಸ್ಥಾನ ಹೊಂದಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಬಿ.ಜೆ.ಪಿ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಅಸಾಂವಿಧಾನಿಕ ಪದ ಬಳಕೆ ಮಾಡಿದ್ದು ಇವರ ಒಂದು ನಡೆ ಇಡೀ ಹೆಣ್ಣು ಕುಲಕ್ಕೆ ಅಪಮಾನ ಮಾಡಿದಂತಾಗಿದೆ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಪ್ರತಿಯೊಬ್ಬ ಹೆಣ್ಣು ಮಕ್ಕಳ ಕಾಳಜಿ ಹಾಗೂ ಗೌರವವನ್ನು ಹೊಂದಿರಬೇಕಾದ ಮತ್ತು ಜವಾಬ್ದಾರಿ ಸ್ಥಾನದಲ್ಲಿರುವ ಒಬ್ಬ ಜನಪ್ರತಿನಿಧಿಯಾಗಿ ಬೆಳಗಾವಿ ಚಳಿಗಾಲದ ಅಧೀವೇಶನದ ಸದನದಲ್ಲಿ ಉನ್ನತ ಸ್ಥಾನದಲ್ಲಿ ಇದ್ದು ತಮ್ಮ ಸರಿ ಸಮಾನವಾದ ಉನ್ನತ ಸ್ಥಾನ ಹೊಂದಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಅಸಾಂವಿಧಾನಿಕ ಪದವನ್ನು ಪ್ರಯೋಗ ಮಾಡಿರುವುದು ಇಡೀ ಹೆಣ್ಣು ಕುಲಕ್ಕೇ ಮತ್ತು ಹೆಣ್ಣು ಮಕ್ಕಳ ಭಾವನೆಗಳಿಗೆ ಹಾಗೂ ಘನತೆಗೆ ಅಪಮಾನವಾಗಿದೆ ಹಾಗಾಗಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಕೆಟ್ಟ ಪದ ಬಳಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.