ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಸುಗಂಧ ದ್ರವ್ಯದ ಬಾಟಲಿಗಳ ಎಕ್ಸ್ಪೈರಿ ದಿನಾಂಕವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದ ವೇಳೆ ಫ್ಲಾಟ್ವೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಮುಂಬೈ ಹೊರವಲಯದಲ್ಲಿರುವ ನಲ್ಲ ಸೊಪಾರಾದಲ್ಲಿರುವ ರೋಶ್ನಿ ಅಪಾರ್ಟ್ಮೆಂಟ್ನ ಮನೆ ಸಂಖ್ಯೆ 112 ರಲ್ಲಿ ನಿನ್ನೆ ತಡರಾತ್ರಿ ಅವಘಡ ಸಂಭವಿಸಿದೆ. ಸಂತ್ರಸ್ತರನ್ನು ಮಹಾವೀರ್ ವಾದರ್ (41), ಸುನೀತಾ ವಾದರ್ (38), ಕುಮಾರ್ ಹರ್ಷವರ್ಧನ್ ವಾದರ್ (9) ಮತ್ತು ಕುಮಾರಿ ಹರ್ಷದಾ ವಾದರ್ (14) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಗಂಧ ದ್ರವ್ಯದ ಬಾಟಲಿಗಳ ಮುಕ್ತಾಯ ದಿನಾಂಕಗಳನ್ನು ಬದಲಾಯಿಸಲು ಪ್ರಯತ್ನಿಸುವ ವೇಳೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಮಾರ್ ಹರ್ಷವರ್ಧನ್ ಅವರು ನಲ್ಲ ಸೊಪಾರಾದ ಲೈಫ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೂ ಮೂವರು ಅದೇ ಪ್ರದೇಶದ ಆಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.