ನವದೆಹಲಿ: ಸೇವಾ ಗುಣಮಟ್ಟ ಸುಧಾರಿಸಲು ನಿಯಂತ್ರಕ ಬದಲಾವಣೆಗಳ ಹೊರತಾಗಿಯೂ, ವಿಮೆ ಮಾಲೀಕರು ಇನ್ನೂ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸುತ್ತಿರುವುದು ಸಮೀಕ್ಷೆಯೊಂದರ ಮೂಲಕ ಬಹಿರಂಗಗೊಂಡಿದೆ.
2024 ರಲ್ಲಿ ಸಲ್ಲಿಕೆಯಾಗಿದ್ದ ವಿಮೆ ಪಾವತಿ ಅರ್ಜಿಗಳ ಪೈಕಿ ಮೂರನೇ ಒಂದರಷ್ಟು ಅರ್ಜಿಗಳು ಇನ್ನೂ ಇತ್ಯರ್ಥವಾಗದೇ ಹಾಗೆಯೇ ಉಳಿದಿರುವುದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಹಿತಿ (IRDAI)ಯ ಮೂಲಕ ಬೆಳಕಿಗೆ ಬಂದಿದೆ.
ವಿಮಾದಾರರು ವರ್ಷದಲ್ಲಿ 1.1 ಲಕ್ಷ ಕೋಟಿ ರೂ.ಗಳಿಗೆ 3 ಕೋಟಿಗೂ ಹೆಚ್ಚು ಕ್ಲೇಮ್ಗಳನ್ನು ನೋಂದಾಯಿಸಿದ್ದಾರೆ, ಜೊತೆಗೆ ಹಿಂದಿನ ವರ್ಷಗಳಿಂದ ಬಾಕಿ ಉಳಿದಿರುವ ರೂ.6,290 ಕೋಟಿಗೆ 17.9 ಲಕ್ಷ ಕ್ಲೈಮ್ಗಳನ್ನು ದಾಖಲಿಸಿದ್ದಾರೆ.
ಈ ಪೈಕಿ, ವಿಮಾದಾರರು ಸುಮಾರು 2.7 ಕೋಟಿ ಕ್ಲೈಮ್ಗಳನ್ನು ಪಾವತಿಸಿದ್ದು ಇದು 83,493 ಕೋಟಿ ರೂಪಾಯಿಗಳಾಗಿವೆ. ಪಾವತಿಸದ ಕ್ಲೈಮ್ಗಳಲ್ಲಿ, 15,100 ಕೋಟಿಯಷ್ಟು ಹಣ ಪಾವತಿಗೆ “ಪಾಲಿಸಿ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಅನುಮತಿಸಲಾಗಿಲ್ಲ” ಎಂದು ತಿಳಿದುಬಂದಿದೆ.
LocalCircles ಸಮುದಾಯ ಸಾಮಾಜಿಕ ಮಾಧ್ಯಮ ನಿಧಾನವಾದ ಆರೋಗ್ಯ ವಿಮೆ ಕ್ಲೈಮ್ ಪ್ರಕ್ರಿಯೆಯನ್ನು ಎತ್ತಿ ತೋರಿಸಿದ್ದ ವರದಿಯನ್ನು ಸಲ್ಲಿದ ಬಳಿಕ ಎಚ್ಚೆತ್ತುಕೊಂಡಿದ್ದ IRDAI ಜೂನ್ 2024 ರಲ್ಲಿ ವಿಮಾ ಸೇವೆಗಳನ್ನು ಸುಧಾರಿಸಲು ಬದಲಾವಣೆಗಳನ್ನು ತರಲು ಪ್ರಯತ್ನಿಸಿತ್ತು.
ಆದಾಗ್ಯೂ, ದೂರುಗಳು ಮತ್ತು ಇತರ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ವರದಿಗಳ ಪ್ರಕಾರ, ಅವರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು LocalCircles ಹೇಳುತ್ತಿದೆ. IRDAI ನಿರ್ದೇಶನದ ಹೊರತಾಗಿಯೂ ಅವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕಂಡುಹಿಡಿಯಲು LocalCircles ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯ ಪ್ರಕಾರ ಭಾರತದ 327 ಜಿಲ್ಲೆಗಳಲ್ಲಿರುವ ಆರೋಗ್ಯ ವಿಮಾ ಪಾಲಿಸಿ ಮಾಲೀಕರಿಂದ 1,00,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಿದೆ.
ಪಾರದರ್ಶಕತೆಯ ಕೊರತೆ
ಕೆಲವು ಆರೋಗ್ಯ ವಿಮಾ ಕಂಪನಿಗಳು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕವಾಗಿರುವುದಿಲ್ಲ, ಅವುಗಳು ಯಾವ ಆರೋಗ್ಯ ಸಮಸ್ಯೆಗಳನ್ನು ಒಳಗೊಳ್ಳುತ್ತವೆ ಮತ್ತು ಹೊರಗಿಡುತ್ತವೆ ಎಂಬುದನ್ನು ಮುಂಗಡವಾಗಿ ಸೂಚಿಸುವುದಿಲ್ಲ. IRDAI ಕ್ಲೈಮ್ಗಳ 100% ವೆಬ್-ಆಧಾರಿತ ಪ್ರಕ್ರಿಯೆಗೆ ಕಡ್ಡಾಯವಾಗಿದೆಯೇ? ಪ್ರತಿ ಹಂತದಲ್ಲೂ ಪಾಲಿಸಿದಾರರಿಗೆ ಮಾಹಿತಿ ನೀಡಲಾಗುತ್ತದೆಯೇ? ಎಂದು ಸಮೀಕ್ಷೆಯ ಪ್ರತಿವಾದಿಗಳನ್ನು ಕೇಳಲಾಗಿದೆ.
ಪ್ರತಿಕ್ರಿಯೆ ನೀಡಿದ 83% ಮಂದಿ “ಇದು ನಡೆಯುತ್ತಿಲ್ಲ ಮತ್ತು ಈ ರೀತಿ ನಡೆಯಬೇಕಾದದ್ದು ಅತ್ಯಗತ್ಯ” ಎಂದು ಹೇಳಿದ್ದಾರೆ; 9% ರಷ್ಟು ಮಂದಿ “ಇದು ಈಗಾಗಲೇ ನಡೆಯುತ್ತಿದೆ ಮತ್ತು ಕ್ರಿಯಾತ್ಮಕವಾಗಿದೆ” ಎಂದು ಹೇಳ್ದಿದರೆ, 8% ಪ್ರತಿಕ್ರಿಯಿಸಿದವರು ಸ್ಪಷ್ಟ ಉತ್ತರವನ್ನು ನೀಡಲಿಲ್ಲ.
ವಿಳಂಬ ಪ್ರಯೋಜನಗಳು ವಿಮಾದಾರರಿಗೆ
ಕ್ಲೈಮ್ಗಳ ಪ್ರಕ್ರಿಯೆಗೆ ತೆಗೆದುಕೊಂಡ ದೀರ್ಘಾವಧಿಯು ವಿಮಾ ಕಂಪನಿಗಳಿಗೆ ಪ್ರಯೋಜನವನ್ನು ನೀಡುತ್ತದೆಯೇ ಎಂದು ಕೇಳಿದಾಗ ಪಾಲಿಸಿದಾರರು ಕಾಯುವಿಕೆಯಿಂದ ಸುಸ್ತಾಗುತ್ತಾರೆ ಮತ್ತು ಕಡಿಮೆ ಮೊತ್ತದ ಅನುಮೋದನೆಯಲ್ಲಿ ಕೊನೆಗೊಳ್ಳುತ್ತದೆಯೇ? (ಜೇಬಿನಿಂದ ಹೆಚ್ಚಿನ ಪಾವತಿಗೆ ಕಾರಣವಾಗುತ್ತದೆ) ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯೆ ನೀಡಿದವರ ಪೈಕಿ 47% ರಷ್ಟು ತಮಗೆ ಅಥವಾ ತಮ್ಮ ಕುಟುಂಬದವರಿಗೆ ಈ ರೀತಿಯ ಅನುಭವವಾಗಿದೆ ಎಂದು ಹೇಳ್ದಿದರೆ, 34% ರಷ್ಟು ಮಂದಿ ನಮಗೆ ಈ ಅನುಭವವಾಗಿಲ್ಲ, ಆದರೆ ನಮಗೆ ಪರಿಚಯದವರಿಗೆ ಈ ರೀತಿಯ ಅನುಭವ ಉಂಟಾಗಿದೆ ಎಂದು ಹೇಳಿದ್ದಾರೆ. 7% ರಷ್ಟು ಮಂದಿ “ಈ ಸನ್ನಿವೇಶ ಸಾಮಾನ್ಯ ಎಂದು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ, 12% ರಷ್ಟು ಮಂದಿ ಸ್ಪಷ್ಟ ಉತ್ತರವನ್ನು ನೀಡಲಿಲ್ಲ.