ಬೆಂಗಳೂರಿನ ವಿಜಯನಗರದಲ್ಲಿರುವ ಸುಧೀಂದ್ರ ನೃತ್ಯ ಕಲಾನಿಕೇತನ ಕಳೆದ 11 ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿಸಿ ಕೊಂಡಿರುವ ಸಂಸ್ಥೆ,, ತನ್ನ ಹನ್ನೊಂದರ ವಾರ್ಷಿಕ ಸಂಭ್ರಮ ಹಾಗೂ ನಿತ್ಯಸಿರಿ ರಾಷ್ಟ್ರೀಯ ನೃತ್ಯ ಹಬ್ಬ 2025 ಅನ್ನು 21 ಫೆಬ್ರವರಿ 25 ಸಂಜೆ 5 ಗಂಟೆಗೆ ಮಲ್ಲತಳ್ಳಿ ಕಲಾ ಗ್ರಾಮದಲ್ಲಿ ಆಚರಿಸಲಾಗುತ್ತದೆ ಇದೇ ಸಂದರ್ಭದಲ್ಲಿ ಗುರು ಸೌಂದರ್ಯ ಶ್ರೀವತ್ಸ ರವರ ಶಿಷ್ಯೆ ವಿದುಷಿ ಮೇಕಲ ಅಗ್ನಿ ಹೋತ್ರಿ ರವರಿಂದ ಭರತನಾಟ್ಯ ಹಾಗೂ ಸದರಿ ಸಂಸ್ಥೆಯ ಶಾಲಾ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ವನ್ನು ಪ್ರಸ್ತುತ ಪಡಿಸಲಿದ್ದಾರೆ,
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾರ್ವತಿ ನೃತ್ಯ ವಿಹಂಗಮ ಸಂಸ್ಥೆ ನಿರ್ದೇಶಕರಾದ ವಿದುಷಿ ನಿರ್ಮಲ ಜಗದೀಶ್ ಹಾಗೂ ಇಂಚರ ಸಂಗೀತ ಶಾಲೆಯ ನಿರ್ದೇಶಕರಾದ ವಿದುಷಿ ದೀಪಾ ನಟರಾಜ್, ರಾಜಾಜಿನಗರ ಸೇಂಟ್ ಆನ್ಸ್ ಶಾಲೆಯ ಸಂಸ್ಕೃತ ಮುಖ್ಯಸ್ಥರಾದ ಗುರು ಹೆಚ್ಎಸ್ ಪದ್ಮಾವತಿ ರವರು ಪಾಲ್ಗೊಳ್ಳಲಿದ್ದಾರೆ ಎಂದು ಸುಧೀಂದ್ರ ನೃತ್ಯ ಕಲಾ ನಿಕೇತನ ಕಲಾ ನಿರ್ದೇಶಕರಾದ ವಿದ್ವಾನ್ ಗುರುರಾಜ್ ವಶಿಷ್ಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ