ಬೆಂಗಳೂರು: ಸುಮೇರು ಟ್ರಸ್ಟ್ ಮತ್ತು ಐಸಿರಿ ಪ್ರಕಾಶನ ವತಿಯಿಂದ ಗುರುಗೌರವ ಸಮರ್ಪಣೆ 2024 ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ನಗರದ ಬಿಎಂಶ್ರೀ ಪ್ರತಿಷ್ಠಾನದ ಎಂ.ವಿ.ಸೀ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಡಾ. ಬಸವರಾಜ ಕಲ್ಗುಡಿ ಅವರು ಸಮಾರಂಭಕ್ಕೆ ಚಾಲನೆ ನೀಡಿ ಐಸಿರಿ ಪ್ರಕಾಶನ ಪ್ರಕಟಿಸಿದ ಹೆಪ್ಪುಗಟ್ಟಿದ ಮಾತುಗಳು ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಕೃತಿಯ ಕುರಿತು ಸುಪ್ರಸಿದ್ಧ ಕವಿಗಳು ಹಾಗೂ ವಿಮರ್ಶಕರಾದ ಸುಬ್ಬು ಹೊಲೆಯಾರ್ ರವರು ವಿಮರ್ಶಿಸಿ ಸವಿಸ್ತಾರವಾಗಿ ವಿವರಿಸಿದರು.
ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು ಡಾ. ಬಸವರಾಜ ಕಲ್ಗುಡಿ ಹಾಗೂ ಡಾ. ಎಚ್.ಬಿ ಶಿವಲೀಲಾ ರವರಿಗೆ ಗುರು ಗೌರವ ಸಮರ್ಪಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ವಿಮರ್ಶಕರು ಹಾಗೂ ಪ್ರಾಧ್ಯಾಪಕರಾದ ಡಾಕ್ಟರ್ ಸುಭಾಷ್ ರಾಜಮಾನೆ, ಸುಮೆರು ಟ್ರಸ್ಟ್ಅಧ್ಯಕ್ಷರಾದ ಡಾ. ಮಂಜುನಾಥ್ ಪಾಳ್ಯ, ಐಸಿರಿ ಪ್ರಕಾಶನದಸಂಸ್ಥಾಪಕರಾದ ಡಾ. ಜಿ. ರೂಪ, ಕಾರ್ಯದರ್ಶಿಗಳಾದ ಡಾ. ಎನ್. ಎಸ್ ಸತೀಶ್, ಜಂಟಿ ಕಾರ್ಯದರ್ಶಿಗಳಾದ ಸಂತೋಷ್ ಜೆ.ವಿ, ಸಹಾಯಕ ಕಾರ್ಯದರ್ಶಿಗಳಾದ ಡಾ. ಸತೀಶ್ ಎ.ಪಿ ಉಪಸ್ಥಿತರಿದ್ದರು