ಬೆಂಗಳೂರು: ಸುರಾನ ಕಾಲೇಜು (ಪೀಣ್ಯ ಕ್ಯಾಂಪಸ್) ಇಲ್ಲಿ ದಿನಾಂಕ:೧೨.೧೧.೨೦೨೪ ರಂದು ನಡೆದ ೬೯ ನೇ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ತುಂಬಾ ಚೆನ್ನಾಗಿ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿಗಳಾದ ನೇಮಿಚಂದ್ರ ಅವರು ಮತ್ತು ಯುವ ಬರಹಗಾರ ನಾಟಕಕಾರ ಚಿಂತಕರು ಶ್ರೀ ತುಕಪ್ಪ ನವರು ಬಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೇಮಿಚಂದ್ರ ಅವರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದರು.
ಅವರಿಂದ ಕನ್ನಡ ಸಾಹಿತ್ಯದ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವುದು, ಜೊತೆಗೆ ಏನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ ಎಂದು ಅತಾಶೆ ಗೊಳ್ಳುವುದರ ಬದಲು ಸಾಧಿಸುವ ಛಲವನ್ನು ಮನದೊಳಗೆ ಹುದುಗಿದ್ದ ಕನ್ನಡ ಸಾಹಿತ್ಯದ ಗಂಧವನ್ನು ಲೇಪಿಸಿದರೆ ಉತ್ತಮ. ಜಗತ್ತಿನ ನಾನಾ ಸಾಧಕರ ಪರಿಚಯ ಮಾಡಿಸುತ್ತಾ ಈ ವೃತ್ತಿನಿರತ ತಂತ್ರಜ್ಞಾನ ಜೊತೆಗೆ ಹೇಗೆ ಯುವ ಪೀಳಿಗೆ ಬದುಕನ್ನು ಅರ್ಥ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು ಸುದೀರ್ಘವಾಗಿ ಸುಮಾರು ೧.೩೦ ಗಂಟೆ ಮಾತನಾಡಿದ್ದು ಅವರ ಮಾತುಗಳನ್ನು ವಿದ್ಯಾರ್ಥಿ ಗಳು ಆಲಿಸಿದ್ದು, ತುಂಬಾ ಚೆನ್ನಾಗಿ ಹಾಗೂ ಇತರರಿಗೂ ಇದು ಉಪಯುಕ್ತ ಮಾಹಿತಿ ಎನಿಸಿತು.
ಮತ್ತೊಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶ್ರೀತುಕಪ್ಪನವರು ಕನ್ನಡ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದುವುದು ಬಹುತೇಕ ಎಲ್ಲ ಬಗೆಯ ಬೆಳವಣಿಗೆ ಹಾಗೂ ರಚನೆಯಲ್ಲಿ ಪ್ರಮುಖ ಪಾತ್ರ ಎಲ್ಲಾ ಭಾಷೆಯ ಜನರು ಬೆರೆಯಬೇಕು ಆ ನಿಟ್ಟಿನಲ್ಲಿ ಕನ್ನಡೇತ್ತರರು ಭಾಷೆಯ ಬೆಳವಣಿಗೆಗೆ ಶ್ರಮಿಸಿರುವಂತವರನ್ನ ನೆನಪು ಮಾಡಿಕೊಂಡು ಬೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಉತ್ತಮ ಫಲದಾಯಕ ಕನ್ನಡ ಸಾಹಿತ್ಯದ ಅಭ್ಯಾಸ ಅವಶ್ಯಕ ಎಂದರು.
ನೇಮಿಚAದ್ರ ಅವರು ಮಾತನಾಡುತ್ತಾ ಈ ರೀತಿ ಇದೆ ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯ ವೈಖರಿ ಎಲ್ಲದಕ್ಕೂ ಒಂದು ಕೊನೆ ಇದೆ.ಕನ್ನಡ ಮತ್ತು ಅದರ
ಸುತ್ತಲಿನ ಪ್ರದೇಶದಲ್ಲಿ ಕಳೆದ ಶತಮಾನಗಳ ಕಾಲ ಶಾತವಾಹನರು ಕದಂಬರು ಚಾಲುಕ್ಯರು ರಾಷ್ಟçಕೂಟರು ಹೊಯ್ಸಳರು ಕಟ್ಟಿಸಿದ ದೇವಾಲಯ ಮತ್ತು ಸೋಮೇಶ್ವರ ದೇವಾಲಯ ಕಲಕೇರಿ ಸಂಗೀತ ನೃತ್ಯ ವೈಭವದ ಮೆರವಣಿಗೆ ಮೂಲಕ ಕನ್ನಡ ಕಲಾರಸಿಕರ ಮನಸೆಳೆದಹೃದಯಕ್ಕೆ ಇದು ಐತಿಹಾಸಿಕ ಸತ್ಯ ಎಂದುಯುವ ಸಾಹಿತಿ ತುಕಪ್ಪನವರು ವಿದ್ಯಾರ್ಥಿಗಳಿಗೆ ಸೃಜನಶೀಲ ಸಾಹಿತ್ಯದ ಮೂಲಕ ಕನ್ನಡ ಭಾಷೆಯ ಭವಿಷ್ಯದ ದೃಷ್ಟಿಯಿಂದ ನೋಡಿದರೆ ಇದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಮುಂದುವರಿದAತೆ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದಡಾ.ವೆಂಕಟೇಶ್ ಮಾತನಾಡಿ ನಮ್ಮ ದೇಶದಲ್ಲಿ ಗಣನೀಯ ಪ್ರಮಾಣದ ಭಾಷೆಗಳ ನಡುವೆ ಇಂಗ್ಲಿಷಿಗೆ ಭಾಷಾಂತರ ಅಧ್ಯಯನ ನಡೆಸಿ ಕಂಡುಕೊAಡ ಸತ್ಯ ಅಂತ್ಯಾAಶಗಳನ್ನು ತಿಳಿಸಿದರು. ಕನ್ನಡ ಸಾಹಿತ್ಯದ ಅಭ್ಯಾಸದ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಅದನ್ನುಮಕ್ಕಳು ಕಲಿಯುವ ಆಸಕ್ತಿ ಎಲ್ಲೊ ಒಂದು ಕಡೆ ಪರಭಾಷೆಯ ವ್ಯಾಮೋಹದ ಕಡೆ ಮುಖ ಮಾಡಿದ್ದಾರೆ ಎಂದು ಅನಿಸುತ್ತದೆ. ಇದು ತುಂಬಾ ದೊಡ್ಡ ನೋವಿನ ಸಂಗತಿ.