ಬೆಂಗಳೂರು: ನಿನ್ನೆ 3/9/24 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡಮಿಯ ವತಿಯಿಂದ “ಸುಳ್ಳುಸುದ್ದಿ- ಸಾಮಾಜಿಕ ನ್ಯಾಯದ ನ್ಯಾಯದ ಮೇಲಾಗುವ ಪರಿಣಾಮಗಳ “ಕುರಿತು ವಿಚಾರ ಸಂಕಿರ್ಣವನ್ನು ಏರ್ಪಡಿಸಲಾಗಿತ್ತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಸುಳ್ಳು ಮಾಹಿತಿ ಸಂಘಟಿತ ಸುದ್ದಿಯಾಗಿ ಸಮಾಜದ ಮೇಲೆ ಕೆಟ್ಟಪರಿಣಾಮ ಬಿರುತ್ತಿದೆ. ಇಂತಹ ಅಪಾಯ ತಪ್ಪಿಸಲು ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ ಎಂದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ . ಬಿ ಕೆ ರವಿ. ಯವರು ಮಾತನಾಡಿ ಸುದ್ದಿಗಳು ಸುಳ್ಳಾಗದೇ ಲಭ್ಯವಾಗುವ ಅವಸರದ ತಪ್ಪು ಮಾಹಿತಿಯಿಂದ ಸಾಮಾಜಿಕ ನ್ಯಾಯಕ್ಕೆ ದಕ್ಕೆಯಾಗುವ ಅಪಾಯವಿದೆ ಎಂದರು.
ಮಾಧ್ಯಮ ಅಕಾಡಮಿಯ ಅಧ್ಯಕ್ಷರಾದ ಆಯೆಶಾ ಖಾನುಮ್ ಮಾಹಾತ್ಮ ಗಾಂಧೀಜಿಯವರ ಪತ್ರಿಕಾ ಧರ್ಮವನ್ನು ಉಲ್ಲೇಖಿಸಿ ಸುಳ್ಳು ಸುದ್ದಿಯನ್ನು / ಮಾಹಿತಿಯಸ್ಸು ಹರಡುವುದು ಮಹಾಅಪರಾಧ ವೆಂದರು. ಓಆಖಿಗಿ ಯ ಶ್ರೀನಿವಾಸನ್ ಜೈನ್ ಸೇರಿದಂತೆ ಅನೇಕ ಮಾಧ್ಯಮ ತಜ್ಞರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.