ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಸುವರ್ಣ ಜನಶಕ್ತಿ ವೇದಿಕೆಗೆ ಸೇರ್ಪಡೆ ಗೊಂಡರು.ಜಗತ್ತಿನಲ್ಲೇ ಅತ್ಯದ್ಭುತವಾಗಿ ನಾಡಪ್ರಭು ಕೆಂಪೇಗೌಡರ ಪುತ್ತಳಿಕೆಯನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರತಿಷ್ಠಾಪಿಸಿದರೆ ಸಾಲದು ಅಂತಹ ಮಹನೀಯರ ಆದರ್ಶ ಮೈ ಗೂಡಿಸಿ ಕೊಳ್ಳಬೇಕು ಸರ್ಕಾರವು ಕೂಡ ಅಲ್ಲಿನ ಅಗತ್ಯ ಸೌಕರ್ಯಗಳಿಗೆ ಕ್ರಮ ಕೈಗೊಳ್ಳಬೇಕು.
ಇತ್ತೀಚಿನ ರಾಜಕೀಯ ದೃಷ್ಟಿಕೂನ ನಿಜಕ್ಕೂ ಪ್ರಜ್ಞಾವಂತ ಸಮಾಜ ತಲೆತಗ್ಗಿಸುವಂತಹ ಸ್ಥಿತಿಯಲಿದೆ. ಕನ್ನಡ ಪರ ಹೋರಾಟಗಾರರು ಅನ್ಯ ಭಾಷೆಗಳ ವಿರುದ್ಧವಲ್ಲ ಕನ್ನಡಿಗರನ್ನು ಭಾಷೆಯಿಂದ ಕಡೆಗಣಿಸಿದರೆ ತೆರಳುವ ಸಿಂಹಗಳಂತೆ ಬೀದಿಗೆ ಹೊರಾಡಬೇಕಾಗುತ್ತದೆ ಜಾತಿ ವ್ಯವಸ್ಥೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವುದಲ್ಲದೆ ಅಭಿವೃದ್ಧಿ ಕೆಲಸಗಳು ಕೂಡ ಕುಂಟಿತ ಗೊಳ್ಳಲಿದೆ.
ಸುವರ್ಣ ಜನಶಕ್ತಿ ವೇದಿಕೆ ರಾಜ್ಯದ ಮೂಲೆ ಮೂಲೆಗಳಲ್ಲಿ ನಮ್ಮ ಕಾರ್ಯಕರ್ತರಿದ್ದು ಕನ್ನಡಿಗರ ಅಗತ್ಯ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಲು ಬದ್ಧತೆ ತೊರಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುವರ್ಣ ಜನಶಕ್ತಿ ವೇದಿಕೆ ಮತ್ತಷ್ಟು ಬಲಗೊಳ್ಳಲು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಮುಂಬರುವ ಕನ್ನಡ ರಾಜ್ಯೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಶಕ್ತಿ ಪ್ರದರ್ಶನವಾಗಬೇಕು.
ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲೂ ಉದ್ಯೋಗಾವ ಕಾಶಗಳಿಗೆ ಪ್ರಾಧಾನ್ಯತೆ ನೀಡಬೇಕು ಕನ್ನಡ, ನಾಡು, ನುಡಿ ಏಳಿಗೆ ಹಾಗೂ ರಾಜ್ಯದ ಅಖಂಡತೆಗೆ ನಮ್ಮೆಲ್ಲ ಕಾರ್ಯಕರ್ತರು ಸಂಘಟಿತ ರಾಗಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುವರ್ಣ ಜನಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ, ಉಪಾಧ್ಯಕ್ಷ ನವೀನ್ ಸಂಘಟನಾ ಕಾರ್ಯದರ್ಶಿ ಚಂದ್ರಪ್ಪ, ಸಲಹಾ ಸಮಿತಿ ಸದಸ್ಯ ನಾಗಾರ್ಜುನ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸೋಮನಥನಹಳ್ಳಿ ಚಂದ್ರು ತಾಲೂಕು ವೇದಿಕೆ ಮುಖಂಡರಾದ ಗಂಗಾಧರ್ ,ಬಾಲಮುರುಳಿ, ನಿಕಟ ಪೂರ್ವ ಅಧ್ಯಕ್ಷ ಕೆಂಪಲಿಂಗ ಪುರ ನರೇಂದ್ರಬಾಬು ಸೇರಿದಂತೆ ನೂರಾರು ಕನ್ನಡ ಪರ ಕಾರ್ಯಕರ್ತರು ಹಾಜರಿದ್ದರು.