ದೇವನಹಳ್ಳಿ: ವಿದ್ಯುಚ್ಛಾಲಿತ ಮೊಬಿಲಿಟಿ ಪರಿಹಾರಗಳಲ್ಲಿ ಮುಂಚೂಣಿಯಲ್ಲಿರುವ ರೆಫೆಕ್ ಇವೀಲ್ಜ್ ತನ್ನ ವ್ಯಾಪ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿ.ಎಲ್.ಆರ್. ಏರ್ ಪೋರ್ಟ್) ತನ್ನ ಉಪಸ್ಥಿತಿಯನ್ನು ವಿಸ್ತರಿಸಿದ್ದು 170+ ಪರಿಸರ-ಸ್ನೇಹಿ ಇವಿ ಟ್ಯಾಕ್ಸಿಗಳು ಈಗಾಗಲೇ ಇರುವ 200 ಕಾರುಗಳ ಜೊತೆ ಸೇರ್ಪಡೆಯಾಗಿವೆ.
ಈ ಉಪಕ್ರಮದಿಂದ ಪ್ರಯಾಣಿಕರಿಗೆ ಬೆಂಗಳೂರು ನಗರ ಮತ್ತು ವಿಮಾನ ನಿಲ್ದಾಣದ ನಡುವೆ ಹಸಿರು ಮತ್ತು ಹೆಚ್ಚು ದಕ್ಷ ಸಾರಿಗೆ ಅವಕಾಶ ನೀಡುತ್ತದೆ. ಈ ವಾಹನಗಳ ಬಿಡುಗಡೆಯು ವಿಮಾನ ನಿಲ್ದಾಣದ ಆಪರೇಟರ್ ಜೊತೆಯಲ್ಲಿ `ಏರ್ ಪೋರ್ಟ್ ಟ್ಯಾಕ್ಸಿ? ಸೇವೆಯ ಮೂಲಕ ಕಾರ್ಯತಂತ್ರೀಯ ಸಹಯೋಗದ ಭಾಗವಾಗಿದೆ.
ಕರ್ನಾಟಕದ ಉಪ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಈ ವಾಹನಗಳಿಗೆ ಚಾಲನೆ ನೀಡಿದ್ದು ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛ ಸಾರಿಗೆಗೆ ರಾಜ್ಯದ ಬದ್ಧತೆಯನ್ನು ಎತ್ತಿ ತೋರಿಸಿದೆ.ಸ್ವಚ್ಛ ಮೊಬಿಲಿಟಿ ಆಯ್ಕೆಗಳನ್ನು ಉತ್ತೇಜಿಸುವ ರೆಫೆಕ್ಸ್ ಇವೀಲ್ಜ್ ಈಗ ಅನುಷ್ಠಾನಗೊಳಿಸಲಾಗಿದೆ ಮತ್ತು ಪ್ರಸ್ತುತ 570 ವಿದ್ಯುಚ್ಛಾಲಿತ ವಾಹನಗಳನ್ನು ನಿರ್ವಹಿಸುತ್ತಿದ್ದು ನಗರದ ಇಂಗಾಲದ ಹೊರ ಸೂಸುವಿಕೆ ಕಡಿಮೆ ಮಾಡುವ ಪ್ರಯತ್ನಗಳಿಗೆ ಗಮನಾರ್ಹ ಕೊಡುಗೆ ನೀಡುತ್ತಿದೆ ಮತ್ತು ಬಿ.ಐ.ಎ.ಎಲ್. ಸುಸ್ಥಿರತೆಯ ಗುರಿಗಳನ್ನೂ ಉತ್ತೇಜಿಸುತ್ತಿದೆ.
ಕರ್ನಾಟಕದ ಮಾನ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಇವಿ ಟ್ಯಾಕ್ಸಿಗಳ ಬಿಡುಗಡೆಯು ಬೆಂಗಳೂರನ್ನು ಹಸಿರು ಮೊಬಿಲಿಟಿಯಲ್ಲಿ ಮುಂಚೂಣಿಯಲ್ಲಿರಿಸುವಲ್ಲಿ ಪ್ರಮುಖ ಪ್ರಗತಿಯಾಗಿದೆ. ನಾನು ರೆಫೆಕ್ಸ್ ಇವೀಲ್ಜ್ ಮತ್ತು ಬಿ.ಐ.ಎ.ಎಲ್.ಗೆ ಸುಸ್ಥಿರತೆಗೆ ಮತ್ತು ಸಂಚರಿಸುವವರಿಗೆ ಸಾಂಪ್ರದಾಯಿಕ ಸಾರಿಗೆ ವಿಧಾನಗಳಿಗೆ ಪರಿಸರ-ಸ್ನೇಹಿ ಪರ್ಯಾಯ ಒದಗಿಸುವಲ್ಲಿ ಅವರ ಬದ್ಧತೆಯನ್ನು ಪ್ರಶಂಸಿಸುತ್ತೇನೆ ಎಂದರು.