ಮೈಸೂರು: ಭಾರತದ ಪ್ರಮುಖ ಪ್ರೀಮಿಯಂ ಫ್ಲೆಕ್ಸಿಬಲ್ ವರ್ಕ್ ಸ್ಪೇಸ್ ಆಪರೇಟರ್ ಗಳಲ್ಲಿ ಒಂದಾಗಿರುವ ಮತ್ತು ಕಳೆದ ಮೂರು ಹಣಕಾಸು ವರ್ಷದಲ್ಲಿ ಒಟ್ಟು ಆದಾಯದ ಗಳಿಕೆಯಲ್ಲಿ ಅತಿದೊಡ್ಡ ಆಪರೇಟರ್ ಆಗಿರುವ ವೀವರ್ಕ್ ಇಂಡಿಯಾ ಮ್ಯಾನೇಜ್ ಮೆಂಟ್ ಲಿಮಿಟೆಡ್ (ವೀವರ್ಕ್ ಇಂಡಿಯಾ) ಸಂಸ್ಥೆಯು ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (“ಡಿಆರ್ಎಚ್ಪಿ”) ಅನ್ನು ಮಾರುಕಟ್ಟೆಗೆ ನಿಯಂತ್ರಕ ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (“ಸೆಬಿ”) ದಲ್ಲಿ ಸಲ್ಲಿಸಿದೆ.
ಕಂಪನಿಯು ದೊಡ್ಡ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳು, ಸ್ಟಾರ್ಟಪ್ ಗಳು ಮತ್ತು ವ್ಯಕ್ತಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಶ್ರೇಣಿಯ ಗ್ರಾಹಕರಿಗೆ ಹೊಂದಿಕೊಳ್ಳುವ, ಉತ್ತಮ- ಗುಣಮಟ್ಟದ ಕಾರ್ಯಸ್ಥಳ (ವರ್ಕ್ ಪ್ಲೇಸ್)ಗಳನ್ನು ಒದಗಿಸುತ್ತದೆ. ಫಾರ್ಚೂನ್ 500 ಕಂಪನಿಗಳು, ಅಂತಾರಾಷ್ಟ್ರೀಯ ಮತ್ತು ದೇಶೀಯ ನಿಗಮಗಳು, ದೊಡ್ಡ ಉದ್ಯಮಗಳು, ಜಿಸಿಸಿಗಳು, ಎಂಎಸ್ಎಂಇಗಳು ಮತ್ತು ಸ್ಟಾರ್ಟ್ ಅಪ್ ಗಳ ಸಮೂಹ ಸೇರಿದಂತೆ ಬಹಳಷ್ಟು ದೊಡ್ಡ ಗ್ರಾಹಕ ನೆಲೆಯನ್ನು ಈ ಸಂಸ್ಥೆಯು ಹೊಂದಿದೆ. ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆಯು 43,753,952 ಈಕ್ವಿಟಿ ಷೇರುಗಳವರೆಗಿನ ಈಕ್ವಿಟಿ ಷೇರುಗಳ ಮಾರಾಟದ ಕೊಡುಗೆ ಅನ್ನು ಒಳಗೊಂಡಿದೆ.
ಮಾರಾಟದ ಕೊಡುಗೆಯು ಎಂಬೆಸಿ ಬಿಲ್ಡ್ ಕಾನ್ ಎಲ್ಎಲ್ಪಿ ನ 33,458,659 ಈಕ್ವಿಟಿ ಷೇರುಗಳನ್ನು ಮತ್ತು 1 ಏರಿಯಲ್ ವೇ ಟೆನೆಂಟ್ ಲಿಮಿಟೆಡ್ನ 10,295,293 ಈಕ್ವಿಟಿ ಷೇರುಗಳನ್ನು ಒಳಗೊಂಡಿದೆ.ಜೆಎಂ ಫೈನಾನ್ಶಿಯಲ್ ಲಿಮಿಟೆಡ್, ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್, ಜೆಫರೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕೋಟಕ್ ಮಹೀಂದ್ರಾ ಕ್ಯಾಪಿಟಲ್ ಕಂಪನಿ ಲಿಮಿಟೆಡ್ ಮತ್ತು 360 ಒನ್ ವ್ಯಾಮ್ ಲಿಮಿಟೆಡ್ ಈ ಸಂಚಿಕೆಯ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್ ಗಳಾಗಿವೆ.