ಬೆಂಗಳೂರು: ಕರ್ನಾಟಕ ಪೌರ ರಕ್ಷಣಾ ದಳ,ವಿಭಾಗ 33 ರವರು ಶಿಕ್ಷಕರ ದಿನಾಚರಣೆಯ ಅಂಗವಾಗಿ ಇದೆ ಸೆ. 1,ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ವಿಶ್ವೇ ಶ್ವಪುರ ವಾಣಿವಿಲಾಸ ರಸ್ತೆಯ ವಾಸವಿ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ.
ಮುಗ್ಧ ಮನದಲ್ಲಿ ಅಕ್ಷರವನ್ನು ಬಿತ್ತಿ,ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ,ಸುಂದರ ನಾಡನ್ನು ಕಟ್ಟುವ ಮಹಾಶಿಲ್ಪಿಗಳು ಅಧ್ಯಾಪಕರು. ನಾಡಕಟ್ಟುವ ಮಹತ್ ಕಾರ್ಯದಲ್ಲಿ ತೊಡಗಿರುವ ಮತ್ತು ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗೌರವಿಸುವುದು ಸಮಾಜದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪೌರ ರಕ್ಷಣಾ ದಳ ವಿಭಾಗ 33 ಬಸವನಗುಡಿ ರವರು ನಿಸ್ವಾರ್ಥ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಗುರುತಿಸಿ ಅವರಿಗೆ ಗುರುವಂದನೆ -ಗೌರವ ಸಮರ್ಪಣೆಯನ್ನು ಹಮ್ಮಿಕೊಂಡಿರುತ್ತಾರೆ.
ಪ್ರಸಕ್ತ ಸಾಲಿನ ಈ ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ.ಕೆ ವಿ ರಾಮರಾವ್ ಒಳಗೊಂಡಂತೆ ಅನೇಕ ಪ್ರೌಢಶಾಲಾ ಶಿಕ್ಷಕರಿಗೆ ಗೌರವಿಸಲಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯ ಸಂಶೋ ಧನಾ ವಿಜ್ಞಾನಿ ಡಾ. ಎಸ್ ಎನ್ ಓಂಕಾರ್ ಮತ್ತು ಡಿಸಿಜಿ ಹೋಂ ಗಾರ್ಡ್ಸ್ ಮತ್ತು ಕೆ ಸಿ ಡಿ ಹಕ್ಕೈ ಅಕ್ಷಯ್ ಮಚ್ಚೀಂದ್ರ ಐ ಪಿ ಎಸ್ ಆಗಮಿಸಲಿದ್ದಾರೆ. ಕೆಸಿಡಿಎಚ್ ಕ್ಯೂ ಆಫೀಸರ್ ಕಮಾಂಡಿಂಗ್ ನಾಗೇಂದ್ರ ಬಾಬು ಎನ್ ಪಿ ಮತ್ತು ವಿಭಾಗ 33ರ ವಿಭಾಗೀಯ ವಾರ್ಡನ್ ಗುರುದತ್ ಬಿ ಎಸ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.