ಬೆಂಗಳೂರು: ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸುಮಾರು ಮೂರು ಗಂಟೆಗೆ ದ್ವಿಚಕ್ರ ವಾಹನದಲ್ಲಿ ಮೂರು ಯುವಕರು ನಂದಿ ಬೆಟ್ಟಕ್ಕೆ ಉದಯಿಸುವ ಸೂರ್ಯನನ್ನು ನೋಡಲು ಹೋಗುತ್ತಿದ್ದ ಸಮಯದಲ್ಲಿ ಅತಿ ವೇಗವಾಗಿ ಹೋಗಿ ಮೇಲ್ಸೇತುವೆ ವಿಭಜಕಕ್ಕೆ ಡಿಕ್ಕಿ ಹೊಡೆದುಕೊಂಡು ಕೀರ್ತಿರಾಜ್(19) ಎಂಬ ಯುವಕ ಮೃತಪಟ್ಟಿರುತ್ತಾನೆ.
ಒಂದೇ ಮೋಟಾರ್ ಬೈಕ್ ನಲ್ಲಿ ಮೂವರು ಹೋಗುತ್ತಿದ್ದರಿಂದ ಹಿಂಬದಿ ಕುಳಿತಿದ್ದ ವಿನಯ್ ಕುಮಾರ್ ಮತ್ತು ವಾಸು ಎಂಬುವರಿಗೆ ತೀವ್ರತರವಾದ ಗಾಯ ಸಂಭವಿಸಿ ಚಿಕ್ಕಜಾಲದಲ್ಲಿರುವ ಲೈಫ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೃತ ವ್ಯಕ್ತಿ ಡೆಲಿವರಿ ಬಾಯ್ ಆಗಿದ್ದು ಮತ್ತಿಬ್ಬರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ ಎಂದು ಚಿಕ್ಜಾಲ ಸಂಚಾರಿ ಪೊಲೀಸರು ತಿಳಿಸಿರುತ್ತಾರೆ.