ಬೆಂಗಳೂರು: ಪೂರ್ವ ವಿಭಾಗದ ಸೈಬರ್ ಪೊಲೀಸರು ಗುಜರಾತ್ನ ನಾಲ್ಕು ಜನ ಸೈಬರ್ ಆರೋಪಿಗಳನ್ನು ಬಂಧಿಸಿ ಒಂದು ಕೋಟಿ 83 ಲಕ್ಷದ 48500 ರೂಪಾಯಿ ನಗದು ವಶಪಡಿಸಿಕೊಂಡಿರುತ್ತಾರೆ.ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ರವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುಜರಾತ್ನ ಆಕ್ಸಿಸ್ ಬ್ಯಾಂಕ್ ಉದ್ಯೋಗಿ ನೇಹಾ(26) ಸೂರತ್ ಜಿಲ್ಲೆ, ವೈಭವ್ ಕಿತಾಡಿಯ(28) ರಾಜಕೋಟ್, ಶೈಲೇಶ್(28)ರಾಜಕೋಟ್ ಮತ್ತು ಶುಭಂ(25) ಸೂರತ್ ರವರುಗಳು ಗುಜರಾತ್ ರಾಜ್ಯದ ಆಕ್ಸಿಸ್ ಬ್ಯಾಂಕಿನ ಕಾರ್ಪೊರೇಟ್ ವಿಭಾಗದ ಮ್ಯಾನೇಜರ್ ಆಗಿದ್ದು,
ಪಿರ್ಯಾದುದಾರರ ಕಂಪನಿಯ ಖಾತೆಗಳ ಡೇಟಾವನ್ನು ಕಳವು ಮಾಡಿ ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ನಕಲಿ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ ಫಾರ್ಮ್ ಹಾಗೂ ಕಂಪನಿಯ ಬೋರ್ಡ್ ರೆಗಲ್ಯೂಷನ್ಸ್ ದಾಖಲೆಗಳನ್ನು ಸೃಷ್ಟಿಸಿ, ಗುಜರಾತ್ ರಾಜ್ಯದ ಬರೋಚ್ ಜಿಲ್ಲೆಯ ಅಂಕಲೇಶ್ವರದ ಆಕ್ಸಿಸ್ ಬ್ಯಾಂಕ್ ನಲ್ಲಿ ಸಲ್ಲಿಸಿ, ಅಲ್ಲಿಂದ ದೂರುದಾರರ ಕಂಪನಿಯ ನೋಡಲ್ ಬ್ಯಾಂಕ್ ಖಾತೆಗಳ ಇಂಟರ್ನೆಟ್ ಬ್ಯಾಂಕಿಂಗ್ನ್ನು ಆರೋಪಿಯ ವಶಕ್ಕೆ ತೆಗೆದುಕೊಂಡು ಆ ಮೂಲಕ ಗುಜರಾತ್ ಮತ್ತು ರಾಜಸ್ಥಾನ ರಾಜ್ಯದ 17 ಮ್ಯೂಲ್ ಬ್ಯಾಂಕ್ ಖಾತೆಗಳಿಗೆ 12 ವರೆ ಕೋಟಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವುದು ತನಿಖೆಯಿಂದ ಪತ್ತೆ ಹಚ್ಚಿ ಆರೂಪಿತರನ್ನು ಗುಜರಾತ್ ರಾಜ್ಯದ ಸೂರತ್ ನವಸಾರಿ ರಾಜಕೋಟ್ ನಲ್ಲಿ ಒಟ್ಟು ನಾಲ್ಕು ಆರೋಪಿಗಳನ್ನು ಡಿಸೆಂಬರ್ 20ರಂದು ಬಂಧಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ಡ್ರೀಮ್ ಪ್ಲಗ್ ಪ್ಲೇಟೆಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಡೈರೆಕ್ಟರ್ ಆಗಿರುವ ನರಸಿಂಹ ವಸಂತ ಶಾಸ್ತ್ರಿ ರವರು ನವಂಬರ್ 15 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆ ಪೂರ್ವ ವಿಭಾಗದಲ್ಲಿ ದೂರು ಸಲ್ಲಿಸಿದರು.ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಪೊಲೀಸರು ತನಿಕೆಯಲ್ಲಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿರುತ್ತಾರೆ.ಆರೋಪಿಗಳ ವಶದಿಂದ ಎರಡು ಮೊಬೈಲ್ ಫೋನ್ ನಕಲಿ ಸಿಐಬಿ ಫಾರಂಗಳು, ನಗದು ಮತ್ತು ಮೂವ್ ಖಾತೆಗಳಿಂದ ಪ್ರೀಸ್ ಮಾಡಲಾದ 55 ಲಕ್ಷ ವಶಪಡಿಸಿಕೊಂಡಿರುತ್ತಾರೆ.