ಕೊಲಂಬೊ: ಜೆಫ್ರಿ ವಾಂಡರ್ಸೆ ಸ್ಪಿನ್ ಮೋಡಿ ನೆರವಿನಿಂದ ಶ್ರೀಲಂಕಾ ತಂಡವು ಟೀಂ ಇಂಡಿಯಾ ವಿರುದ್ಧ 32 ರನ್ಗಳ ಜಯ ಸಾಧಿಸಿದೆ.ಭಾನುವಾರ ಇಲ್ಲಿ ನಡೆದ 2ನೇ ಏಕದಿನ ಸರಣಿಯ ಪಂದ್ಯದಲ್ಲಿ 208 ರನ್ಗಳಿಗೆ ಭಾರತ ಆಲೌಟ್ ಆಗಿ ಲಂಕಾ ಎದುರು ಮಂಡಿಯೂರಿತು.
ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ಅಕ್ಷರ್ ಪಟೇಲ್ ಹೊರತುಪಡಿಸಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಕಂಡುಬಂತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 50 ಓವರ್ಗೆ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತು. 241 ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 42.2 ಓವರ್ಗೆ 208 ರನ್ ಗಳಿಸಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.
ಈ ಪಂದ್ಯದಲ್ಲೂ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರು. ಕೆ.ಎಲ್.ರಾಹುಲ್ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಪರಿಣಾಮವಾಗಿ ಟೀಂ ಇಂಡಿಯಾ 208 ರನ್ಗಳಿಗೆ ಆಲೌಟ್ ಆಯಿತು. ಜೆಫ್ರಿ ವಾಂಡರ್ಸೆ (6 ವಿಕೆಟ್), ಚರಿತ್ ಅಸಲಂಕಾ (3 ವಿಕೆಟ್) ಅಮೋಘ ಕೈಚಳಕದಿಂದ ಶ್ರೀಲಂಕಾ ಗೆಲುವು ದಾಖಲಿಸಿತು.