ಕನಕಪುರ: ಒಂದು ಸಹಕಾರ ಸಂಘ ಲಾಭಗಳಿಸಲು ಸದಸ್ಯರ ಹಾಗೂ ಗ್ರಾಹಕರ ಸಹಕಾರ ಅತ್ತ್ಯಗತ್ಯ ಎಂದು ನಗರದ ಕ್ಯಾಪಿಟಲ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಗುರುಸ್ವಾಮಿ ತಿಳಿಸಿದರು.
ನಗರದ ರೋಟರಿ ಭವನದಲ್ಲಿ ನಡೆದ ಸೊಸೈಟಿಯ 2023/24 ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಂದು ಸಹಕಾರ ಸಂಸ್ಥೆಯು ಲಾಭದತ್ತ ಸಾಗಲು ಸದಸ್ಯರು ತಮ್ಮ ಆರ್ಥಿಕ ವಹಿವಾಟನ್ನು ಸಂಸ್ಥೆಯ ಮೂಲಕ ನಡೆಸಿದಾಗ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಳೆದ ಸಾಲಿನ ವಾರ್ಷಿಕ ಮಹಾಸಭೆಯ ಸೂಚನಾ ನಡವಳಿ ಪತ್ರವನ್ನು ಮಂಡಿಸಿ ಜಮಾ-ಖರ್ಚು ವೆಚ್ಚ ಹಾಗೂ ಬಜೆಟ್ ಅಂದಾಜು ಆಯವ್ಯಯಕ್ಕೆ ಸದಸ್ಯರ ಅನುಮೋದನೆ ಪಡೆದರು. ಸೊಸೈಟಿಯ ಉಪಾಧ್ಯಕ್ಷ ಡಾ. ವಿಜಯ್ ಕುಮಾರ್ಶಿ ರಹಟ್ಟಿ, ನಿರ್ದೇಶಕರುಗಳಾದ ರಾಜು, ಮಹೇಶ್, ಶಿವಕುಮಾರ್ ನಾಯಕ್, ನಾಗೇಶ್, ಎಸ್. ವಿ. ರುದ್ರೇಶ್, ಸುನೀಲ್ ಕುಮಾರ್ ಸೇರಿದಂತೆ ಸದಸ್ಯರು, ಹಾಗೂ ಸಿಬ್ಬಂದಿ ವರ್ಗ ಸಭೆಯಲ್ಲಿ ಉಪಸ್ಥಿತರಿದ್ದರು.