ನಾಯಕ ಗುಮಾನ್ ಸಿಂಗ್ ಅವರ ಅಮೋಘ ಆಟದ ಬಲದಿಂದ ಗುಜರಾತ್ ಜೈಂಟ್ಸ್ ತಂಡ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು ೪೭-೨೮ ರಲ್ಲಿ ೧೯ ಅಂಕಗಳಿAದ ಮಣಿಸಿತು.
ಇದರೊಂದಿಗೆ ಸರಣಿ ಸೋಲುಗಳ ನಂತರ ಟೂರ್ನಿಯಲ್ಲಿಎರಡನೇ ಜಯ ದಾಖಲಿಸುವಲ್ಲಿ ಜೈಂಟ್ಸ್ ಯಶಸ್ವಿಯಾಯಿತು. ಹಿಂದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ಗೆಲುವಿನ ಲಯಕ್ಕೆ ಮರಳಿದ್ದ ಬೆಂಗಾಲ್, ಸ್ಥಿರತೆ ಕಾಯ್ದುಕೊಳ್ಳಲು ವಿಫಲವಾಯಿತು. ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಪಂದ್ಯದ ಉಭಯ ಅವಧಿಗಳಲ್ಲಿ ಜೈಂಟ್ಸ್ ತಂಡ ರೇಡಿಂಗ್ ಮತ್ತು ಟ್ಯಾಕಲ್ಗಳಲ್ಲಿ ಮಿಂಚಿತು. ಗುಮಾನ್ ಸಿಂಗ್ ೧೭ ಅಂಕ ಕಲೆಹಾಕಿ ಪಂದ್ಯದ ಗೆಲುವಿನ ರೂವಾರಿಯೆನಿಸಿರು. ಪ್ರತೀಕ್ ದಹಿಯಾ, ಹಿಮಾಂಶು ಮತ್ತು ಜಿತೇಂದರ್ ಯಾದವ್ ತಲಾ ೬ ಅಂಕಗಳನ್ನು ಕಲೆಹಾಕಿದರು. ಅಗ್ರಸ್ಥಾನದಲ್ಲಿರುವ ಹರಿಯಾಣ ಸ್ಟೀಲರ್ಸ್ ತಂಡ ಇನ್ನೊಂದು ಪಂದ್ಯದಲ್ಲಿ ೩೭-೩೨ ಪಾಯಿಂಟ್ಗಳಿAದ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು.
ಸೋಲಿನ ಕೊಂಡಿ ಕಳಚಿದ ಜೈಂಟ್ಸ್
