ಕೋಲಾರ: ಸೌಹಾರ್ದ ಭಾರತಕ್ಕಾಗಿ ಕೋಲಾರದಿಂದ ನಾಗಪುರಕ್ಕೆ ಆರಂಭಿಸಿದ್ದ ಸೈಕಲ್ ರ್ಯಾಲಿಯು ದಿನಾಂಕ 12-10-2024 ರಂದು ನಾಗಪುರದಲ್ಲಿ ಧಮ್ಮ ದೀಕ್ಷೆ ಸ್ವೀಕರಿಸುವ ಮೂಲಕ ಮುಕ್ತಾಯಗೊಂಡಿತು.ರ್ಯಾಲಿಯು ಕೋಲಾರದ ನಚಿಕೇತನ ನಿಲಯದ ಆವರಣದಲ್ಲಿರುವ ಬುದ್ಧಮಂದಿರದಿಂದ ಸೆ, 30 ರಂದು ಸೌಹಾರ್ದ ಭಾರತಕ್ಕಾಗಿ ನಾಗಪರಕ್ಕೆ ಸೈಕಲ್ ರ್ಯಾಲಿಯ ಮೂಲಕ ಚಾಲನೆಗೊಂಡಿತ್ತು.
ಐತಿಹಾಸಿಕ ರ್ಯಾಲಿಗೆ ಕಾರಣಕರ್ತರಾದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಸಮಾಜ ಕಲ್ಯಾಣ ಇಲಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ಡಾ.ಸಿ.ಎಂ.ಮುನಿಯಪ್ಪ ಅವರ ಹಾದಿಯಾಗಿ ರ್ಯಾಲಿಗೆ ಬೆಂಬಲ ನೀಡಿದ ಎಲ್ಲಾ ದ.ಸಂ.ಸ ನಾಯಕರು ಮತ್ತು ರಾಜಕೀಯ ಮುಖಂಡರು ಹಾಗೂ ಹೈದರಾಬಾದ್ನಲ್ಲಿ ನಮಗೆ ಸಂಪೂರ್ಣ ಸಹಕಾರ ನೀಡಿದ ಗದ್ದರ್ ಪೌಂಡೇಶನ್ ಸಂಸ್ಥಾಪಕ ಕಾರ್ಯದರ್ಶಿ ಸೂರ್ಯಕಿರಣ್ ಗದ್ದರ್,
ಹಿರಿಯ ಪತ್ರಕರ್ತ ಅ.ಸ.ಶ್ರೀರಾಮುಲು, ಅದಿಲಾಬಾದ್ ರಾಜಕೀಯ ಮುಖಂಡ ಮೇಕಲ ಮಲ್ಲನ್ನ, ನಾಗಪುರದ ಬಿ.ಎಸ್.ಐ ಮುಖಂಡ ರವಿಕೀರ್ತಿ, ಚಾಮರಾಜನಗರ ಬಿ.ಎಸ್.ಐ. ಕಾರ್ಯಕರ್ತ ಶಿವಣ್ಣ ಅವರಿಗೆ ರ್ಯಾಲಿಯ ನಿರ್ವಾಹಕ ಅಂತರಾಷ್ಟ್ರೀಯ ಕ್ರೀಡಾಪಟು ಬೀರಮಾನಹಳ್ಳಿ ಶ್ರೀನಿವಾಸ್ ರವರು ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.