ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರೆಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಹೊಡೆಬಡಿಯ ಬ್ಯಾಟರ್ ರಜತ್ ಪಾಟೀದಾರ್ ಅವರನ್ನು ಹೊಸ ನಾಯಕನನ್ನಾಗಿ ನೇಮಕ ಮಾಡಿ ಫ್ರಾಂಚೈಸಿಯು ಗುರುವಾರ ಘೋಷಿಸಿದೆ.
ಈ ಬಗ್ಗೆ ಆರ್ ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ. ಈಮೂಲಕ ಆರ್ ಸಿಬಿಯು ತನ್ನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿರುವುದಾಗಿ ಫ್ರಾಂಚಸಿಯು ಸಂತಸ ವ್ಯಕ್ತಪಡಿಸಿದೆ.2021ರಲ್ಲಿ ಆರ್ ಸಿಬಿ ತಂಡಕ್ಕೆ ಆಯ್ಕೆಯಾದ ರಜತ್ ಪಾಟೀದಾರ್ ಅವರು ಈವರೆಗೆ ಒಟ್ಟು 27 ಪಂದ್ಯಗಳಿಂದ 34.73ರ ಸರಾಸರಿಯಲ್ಲಿ 799 ರನ್ ಕಲೆ ಹಾಕಿದ್ದಾರೆ.
ಏತನ್ಮಧ್ಯೆ 2023ರ ಸೀಸನ್ ನಲ್ಲಿ ಅವರು ಗಾಯದ ಸಮಸ್ಯೆಯಿಂದಾಗಿ ಕಾಣಿಸಿಕೊಂಡಿರಲಿಲ್ಲ. 2024ರ ಸೀಸನ್ ನಲ್ಲಿ ತಂಡ ಪ್ಲೇ ಆಫ್ ಗೆ ಪ್ರವೇಶಿಸುವಲ್ಲಿ ಅವರ ಪಾತ್ರ ಬಹಳ ಪ್ರಮುಖವಾಗಿತ್ತು. 15 ಪಂದ್ಯಗಳ 13 ಇನ್ನಿಂಗ್ಸ್ ಗಳಿಂದ 30.38 ಸರಾಸರಿಯಲ್ಲಿ ಅವರು 395 ರನ್ ಗಳಿಸಿದ್ದರು. ಅದರಲ್ಲಿ ಐದು ಅರ್ಧ ಶತಕಗಳಿದ್ದವು.