ರೇಣುಕಾ ಠಾಕೂರ್ ಸಿಂಗ್ ಅವರ ಮಾರಕ ಬೌಲಿಂಗ್ ದಾಳಿಯ ಜತೆಗೆ ಸ್ಮೃತಿ ಮಂದಾನ ಅವರ ಆಕರ್ಷಕ ಅರ್ಧ ಶತಕದ ಬಲದಿಂದ ಭಾರತ ಮಹಿಳಾ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ 211 ರನ್ ಗಳ ಭಾರೀ ಗೆಲುವು ಸಾಧಿಸಿದೆ.
ಈ ಮೂಲಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸ್ಥಾಪಿಸಿದೆ. ಭರ್ಜರಿ ಲಯದಲ್ಲಿರುವ ಭಾರತದ ಸ್ಟಾರ್ ಬ್ಯಾಟರ್ ಕ್ಯಾಲೆಂಡರ್ ವರ್ಷದಲ್ಲಿ 1600 ರನ್ ಗಳಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ವಿಶ್ಲದಾಖಲೆಯನ್ನೂ ಬರೆದಿದ್ದಾರೆ. ಇದರೊಂದಿಗೆ ತವರಿನಲ್ಲಿ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ಗೆ ಭರ್ಜರಿಯಾಗಿಯೇ ಸಿದ್ಧತೆ ಆರಂಭಿಸಿತು.
ಕೊತಾಂಬಿ ಕ್ರೀಡಾಂಗಣದಲ್ ಲಿಭಾನುವಾರ ನಡೆದ ಹಣಾಹಣಿಯಲ್ಲಿಮೊದಲು ಬ್ಯಾಟ್ ಮಾಡಿದ ಭಾರತ, 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 314 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವನ್ನು ಕೇವಲ 26.2 ಓವರ್ಗಳಲ್ಲಿ 103 ರನ್ಗಳಿಗೆ ಆಲೌಟ್ ಮಾಡಿದ ಆತಿಥೇಯರು ಏಕಪಕ್ಷೀಯ ಗೆಲುವು ದಾಖಲಿಸಿದರು.