ಬೆಂಗಳೂರು: ಬೆಂಗಳೂರಿನಲ್ಲೇ ೩ ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿದ್ದು, ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪೀಸ್ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ
ನೊಂದ ಚಾಲಕರ ವೇದಿಕೆ ಸಹಯೋಗದೊಂದಿಗೆ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿದ್ದ ಮೇರುನಟ, ದಿವಂಗತ ಶಂಕರ್ನಾಗ್ ಅವರ ಜನ್ಮದಿನದ ಪ್ರಯುಕ್ತ ೧೧ನೇ ವರ್ಷದ “ಚಾಲಕರ ದಿನವನ್ನು” ಉದ್ಘಾಟಿಸಿ ಮಾತನಾಡಿಬೆಂಗಳೂರಿನಲ್ಲಿ ಆಟೋ ಚಾಲಕರ ಸೇವೆ ಶ್ಲಾಘನೀಯ. ಶಂಕರ್ನಾಗ್ ಅವರು ಇಂದಿಗೂ ಸಹ ಆಟೋ ಚಾಲಕರಿಗೆ ಅತ್ಯಂತ ಪ್ರಿಯವಾದ, ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಇವರ ಆದರ್ಶದಂತೆ ಇನ್ನಷ್ಟು ಉತ್ತಮ ಸೇವೆಯನ್ನು ಚಾಲಕರು ನೀಡಲಿ ಎಂದು ಆಶಿಸಿದರು.
ಪೀಸ್ ಆಟೋ ವತಿಯಿಂದ ಪ್ರತಿವರ್ಷ ಶಂಕರ್ನಾಗ್ ಅವರ ಜನ್ಮದಿನದಂದು ಚಾಲಕರ ದಿನವನ್ನಾಗಿ ಆಚರಿಸುತ್ತಾ, ಆಟೋಚಾಲಕರಿಗೆ ಹಲವು ಸಹಾಯ ಮಾಡುತ್ತಾ ಬಂದಿದ್ದಾರೆ, ಒಬ್ಬರಿಗೆ ಉಚಿತ ಆಟೋ ನೀಡುತ್ತಿದ್ದರು, ಈ ಬಾರಿ ಎರಡು ಆಟೋ ಉಚಿತವಾಗಿ ನೀಡಿದ್ದಾರೆ. ಪ್ರತಿಯೊಬ್ಬ ಆಟೋ ಚಾಲಕರು ಉತ್ತಮ ನಡವಳಿಕೆಯಿಂದ ಇರಬೇಕು ಎಂದರು.
ಚಾಲಕರ ಸ್ಪೂರ್ತಿಯ ಚಿಲುಮೆ ಮೇರುನಟ ದಿವಂಗತ ಶಂಕರ್ನಾಗ್ ಅವರ ಜನ್ಮದಿನವನ್ನು “ಚಾಲಕರ ದಿನ”ವನ್ನಾಗಿ ಸರ್ಕಾರ ಅಧಿಕೃತವಾಗಿ ಆಚರಿಸಬೇಕು ಎಂದು ಪೀಸ್ ಆಟೋ ಸೇರಿದಂತೆ ವಿವಿಧ ಚಾಲಕರ ಸಂಘಟನೆಯು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸ್ವಂತ ಆಟೋ ಖರೀದಿಗೆ ಮಹಿಳೆಯರಿಗೆ ನೆರವು: ಪೀಸ್ ಆಟೋ ಸಂಘಟನೆ ವತಿಯಿಂದ ೩೦೦ ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿದ್ದು, ಈ ಮಹಿಳೆಯರು ಸ್ವತಃ ಆಟೋ ಖರೀದಿಗೆ ಹಣಕಾಸಿನ ನೆರವು ಸಹ ಇದೇ ವೇಳೆ ನೀಡಲಾಯಿತು.
ಎಕ್ಸ್ಪೊನೆಂಟ್ ಕಂಪನಿಯ ೧೫ ನಿಮಿಷದಲ್ಲೇ ಚಾರ್ಜ್ ಆಗುವ ವಿ ಚಾರ ಮತ್ತೊಂದು ವಿಶೇಷವೆಂದರೆ, ಚಾಲನಾ ವೃತ್ತಿಯಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಆಯ್ದ ಚಾಲಕರಿಗೆ ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು. ಇನ್ನು, ಬಡ ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು ೫ ಸಾವಿರಕ್ಕೂ ಹೆಚ್ಚು ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನ, ಶಾಲಾ ವಾಹನದ ಚಾಲಕರು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು ೧೦೦ ಮಹಿಳಾ ಚಾಲಕಿಯರು ಸೇರಿದ್ದು ವಿಶೇಷ.
ನಟ ಶ್ರೀ ಮುರುಳಿ, ನಟ ಗರುಡ ರಾಮ್, ಪೀಸ್-ಆಟೋ ಅಧ್ಯಕ್ಷರು ರಘು ನಾರಾಯಣ ಗೌಡ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್ ಅಧ್ಯಕ್ಷ ಮಂಜುನಾಥ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್ ಅಧ್ಯಕ್ಷ ಜಿ. ರವಿ ಕುಮಾರ್ , ಜೈ ಭಾರತ ವಾಹನ ಚಾಲಕರ ಸಂಘದ ಅಧ್ಯಕ್ಷರು ಚಂದ್ರ ಕುಮಾರ್, ನೊಂದ ಚಾಲಕರ ವೇದಿಕೆ ರಾಜು, ಜೈ ಕರ್ನಾಟಕ ಅಧ್ಯಕ್ಷರು ಆನಂದ್, ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಪೂಜಾರಿ ಹಲವರು ಪಾಲ್ಗೊಂಡಿದ್ದರು.