ನವದೆಹಲಿ: ರಷ್ಯಾದ ಸೈನ್ಯದಲ್ಲಿ ಕೆಲಸ ಮಾಡುವಂತೆ ಭಾರತೀಯರನ್ನು ಒತ್ತಾಯಪಡಿಸುತ್ತಿಲ್ಲ,ಅವರು ಹಣ ಸಂಪಾದಿಸಲು ತಾವಾಗಿಯೇ ಬರುತ್ತಾರೆ ಮತ್ತು ಅದಕ್ಕಾಗಿ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದಾರೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯವಾಗಿದೆ ಎಂದು ರಷ್ಯಾದ ಕುರ್ಸ್ಕ್ನಲ್ಲಿರುವ ಶಾಸಕ ಅಭಯ್ ಕುಮಾರ್ ಸಿಂಗ್ ಹೇಳಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿದ ಅಭಯ್ ಕುಮಾರ್ ಸಿಂಗ್ ಬೇರೆ ನೌಕರಿಯಂತೆ ರಷ್ಯಾದ ಸೈನ್ಯಕ್ಕೆ ಸೇರಲು ಬಯಸುವ ಜನರು ಪ್ರಪಂಚದಾದ್ಯಂತ ಇದ್ದಾರೆ ಎಂದು ತಿಳಿಸಿದರು.
ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಅವರೊಂದಿಗೆ ಸಮಸ್ಯೆಯನ್ನು ಪ್ರಸ್ತಾಪಿಸಿದ ನಂತರ, 35 ಭಾರತೀಯ ಪ್ರಜೆಗಳನ್ನು ರಷ್ಯಾದ ಸೇನೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸೆಪ್ಟೆಂಬರ್ನಲ್ಲಿ ತಿಳಿಸಿದೆ. ಪ್ರಧಾನಿಯವರ ಭೇಟಿಗೆ ಮುನ್ನ 10 ಮಂದಿ ಸೇರಿದಂತೆ ಒಟ್ಟು 45 ಭಾರತೀಯರನ್ನು ಬಿಡುಗಡೆ ಮಾಡಿದೆ. ಸಂಘರ್ಷದಲ್ಲಿ ಕನಿಷ್ಠ ಒಂಬತ್ತು ಭಾರತೀಯರು ಸಾವನ್ನಪ್ಪಿದ್ದಾರೆ.
ರಷ್ಯಾದ ಮೊದಲ ಉಪಪ್ರಧಾನಿ ಡೆನಿಸ್ ಮಂಟುರೊವ್ ಅವರೊಂದಿಗೆ ಭಾರತಕ್ಕೆ ಬಂದ ನಿಯೋಗದಲ್ಲಿ ಡಾಯ ಅಭಯ್ ಕುಮರ್ ಸಿಂಗ್ ಕೂಡ ಇದ್ದರು. ಅವರು ಗಡಿ ರಾಜ್ಯವಾದ ಕುರ್ಸ್ಕ್ನಿಂದ ಶಾಸಕರಾಗಿ ಎರಡು ಬಾರಿ (2017, 2022) ಚುನಾಯಿತರಾಗಿದ್ದಾರೆ, ಅಲ್ಲಿ ಪ್ರಸ್ತುತ ಉಕ್ರೇನ್ನ ಗಡಿಯಲ್ಲಿ ಭಾರಿ ಮಿಲಿಟರಿ ನಿಯೋಜಿಸಲಾಗಿದೆ. ಸಿಂಗ್ 1991 ರಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ವಿದ್ಯಾರ್ಥಿಯಾಗಿ ಪಾಟ್ನಾದಿಂದ ಕುರ್ಸ್ಕ್ಗೆ ತೆರಳಿದರು. ಫಾರ್ಮಾ ವ್ಯವಹಾರದಲ್ಲಿ ತೊಡಗಿ ನಂತರ ರಿಯಲ್ ಎಸ್ಟೇಟ್ಗೆ ಉದ್ಯಮದಲ್ಲಿದ್ದು, ಆದಾದ ನಂತರ ಅವರು ಮುಖ್ಯವಾಹಿನಿಯ ರಾಜಕೀಯಕ್ಕೆ ಸೇರಿದರು.
ನಾನು ಮೊದಲ ಬಾರಿಗೆ ಕುರ್ಸ್ಕ್ನಲ್ಲಿ ಚುನಾವಣೆಗೆ ಸ್ಪರ್ಧಿಸಿದಾಗ, ಜನರು ನನ್ನೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದರಿಂದ ನಾನು ಪ್ರಚಂಡ ಗೆಲುವು ಸಾಧಿಸಿದೆ. ನನ್ನ ಬೇರುಗಳು ಭಾರತದಲ್ಲಿದ್ದರೂ ನಾನು ಈಗ ಅವರಿಗೆ ಸೇರಿದ್ದೇನೆ” ಎಂದು ಸಿಂಗ್ ಹೇಳಿದ್ದಾರೆ. “ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರವು ಏರುಗತಿಯಲ್ಲಿದ್ದುಎರಡು ಸರ್ಕಾರಗಳ ನಡುವೆ ಮಾತ್ರವಲ್ಲದೆ ಜನರೊಂದಿಗೆ ಜನರಿಗೆ ಉತ್ತಮ ಬಾಂಧವ್ಯವಿದೆ. ಶೀಘ್ರದಲ್ಲೇ ಶಾಂತಿ ನೆಲೆಸುತ್ತದೆ ಮತ್ತು ಸಂಘರ್ಷವು ಕೊನೆಗೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದರು. .