ಪೀಣ್ಯ ದಾಸರಹಳ್ಳಿ: ‘ನಿಮ್ಮಮನೆಯ ಬೀದಿ, ರಸ್ತೆ ಇನ್ನಿತರೆ ಸ್ಥಳಗಳಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಚತೆಯನ್ನು ಸಾರುತ್ತಾ ಬರುವ ವಾಹನಗಳಿಗೆ ಕಸ ನೀಡಿ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಸಹಕರಿಸಿ’ಎಂದು ಪುರಸಭೆ ಮುಖ್ಯಾಧಿಕಾರಿ ಹೆಚ್. ಎ.ಕುಮಾರ್ ಸಾರ್ವಜನಿಕರಿಗೆ ಕರೆ ನೀಡಿದರು.ಸ್ವಚ್ಚಭಾರತ್ ಮಿಷನ್ (ನಗರ) ನಗರಾಭಿವೃದ್ದಿ ಇಲಾಖೆ,ಪೌರಾಡಾಳಿತ ನಿರ್ದೇಶನಾಲಯ,ಚಿಕ್ಕಬಾಣಾವರ ಪುರಸಭೆ ವತಿಯಿಂದ 15 ದಿನಗಳ ಕಾಲ ಹಮ್ಮಿಕೊಂಡಿರುವ ಸ್ವಚ್ಚತಾ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದರು.
ಸ್ವಭಾವ ಸ್ವಚ್ಚತೆ,ಸಂಸ್ಕಾರ ಸ್ವಚ್ಚತೆ ಎಂಬ ಸಂದೇಶದಡಿ ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಮೊದಲನೆ ದಿನ ಪೌರಕಾರ್ಮಿಕರೆಲ್ಲರೂ ಸೇರಿ ಸ್ವಚ್ಚ ಮಾಡುವ ಕಾರ್ಯ ಮಾಡಿದ್ದೆವೆ. ಶಾಲೆಗಳಲ್ಲಿ ಎರಡು ದಿನಗಳ ಕಾಲ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಹಾಗೆಯೇ ಹೆಚ್ಚು ಕಸ ಇರುವ ಕಡೆ ಬ್ಲಾಕ್ ಪಾಯಿಂಟ್ ಅಂತ ಗುರುತಿಸಿ ಅಲ್ಲಿನ ಜಾಗವನ್ನು ಸೌಂಧರ್ಯಕರಣಗೊಳಿಸುವ ನಿಟ್ಟಿನಲ್ಲಿ ಇಂದು ಗಿಡನೆಟ್ಟು , ಜನ ಕುಳಿತುಕೊಳ್ಳಲು ಬೆಂಚ್ ಆಳವಡಿಸಿ ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳನ್ನು ಆಳವಡಿಸಿ ಮತ್ತೆ ಅಲ್ಲಿ ಕಸ ಹಾಕದಂತೆ ಮುಂಜಾಗ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.
ಸ್ವಚ್ಚತಾ ಅಭಿಯಾನದಲ್ಲಿ 15 ದಿನಗಳ ಕಾಲ ವಿವಿಧ ರೀತಿಯಲ್ಲಿ ಮನೆ ಮನೆ ಕಸ ಸಂಗ್ರಹಣೆ, ಮನೆಗಳಿಗೆ ಕರಪತ್ರ ಹಂಚಿ ಕಸವನ್ನು ಕಸದ ಗಾಡಿಗಳಿಗೆ ನೀಡಿ ಎಂದು ಗಮನಕ್ಕೆ ತರುವುದು,ಬ್ಲಾಕ್ ಪಾಯಿಂಟ್ ಗಳನ್ನು ಗುರುತಿಸಿ ಸೌಂಧರ್ಯಕರಣಮಾಡುವುದು,ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದವೆ’ ಎಂದರು.
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಮಾತನಾಡಿ ‘ಗಣಪತಿನಗರದಿಂದ ತಮ್ಮೇನಹಳ್ಳಿಗೆ ಸಂಚರಿಸುವ ಮುಖ್ಯರಸ್ತೆಯಲ್ಲಿ ಬೈಕ್ ಹಾಗೂ ಕಾರಿನಲ್ಲಿ ಸಂಚರಿಸುವವರು ಇಲ್ಲಿ ಕಸ ಹೆಸರು ಹೋಗುತ್ತಾರೆ.ಈ ರಸ್ತೆಯಲ್ಲಿ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಇದ್ದು ಕಸ ಕೊಳೆತು ಸಾಂಕ್ರಮಿಕ ರೋಗ ಹರಡಿ ಮಕ್ಕಳಿಗೆ ಖಾಯಲೆ ಉಂಟಾಗುವ ಭೀತಿ ಎದುರಾಗುತ್ತದೆ.
ಖಾಲಿ ಜಾಗ ಕಂಡಲ್ಲಿ ಹಾಗೂ ಎಲ್ಲೆಂದರಲ್ಲಿ ಕಸ ಬಿಸಾಡುವ ಮುನ್ನ ಸಾಮಾನ್ಯ ಪರಿಜ್ಞಾನವಿರಲಿ ಮನೆ ಬಳಿ ಬರುವ ಕಸದ ಗಾಡಿಗೆ ಕಸ ನೀಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಂದರವಾಗಿ ಸ್ವಚ್ಚವಾಗಿ ಇಡೋಣ’ ಎಂದರು.ಈ ವೇಳೆ ಎಂಜಿನಿಯರ್ ಸುಮತಿ, ಪರಿಸರ ಹರೀಶ್, ರೆವಿನ್ಯೂ ಅಧಿಕಾರಿ ಪ್ರದೀಪ್, ನಾಗೇಂದ್ರಗೌಡ, ಮೂರ್ತಿ,ಪ್ರಶಾಂತ್ ಮುಂತಾದವರಿದ್ದರು.