ಬೆಂಗಳೂರು: ಸ್ವಪ್ನ ಬುಕ್ ಹೌಸ್ಗೆ ಇದೀಗ 58ನೇ ವರ್ಷದ ಸಂಭ್ರಮ ಇದರ ಅಂಗವಾಗಿ ಪುಸ್ತಕ ಸುಗ್ಗಿ ಕಾರ್ಯಕ್ರಮವನ್ನು ಗಾಂಧಿನಗರದ ಸ್ವಪ್ನ ಬುಕ್ ಹೌಸ್ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುಸ್ತಕ ಸುಗ್ಗಿ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕ್ಷರ ಸುಗ್ಗಿ ಮಾತಿನ ಹುಗ್ಗಿ ಮಾತುಕತೆ ನಡೆಯಿತು. ಕವಿ. ಲೇಖರಾದ ರಾ.ನಂ.ಚಂದ್ರಶೇಖರ್, ಡಾ.ಡಿ.ವಿ.ಗುರು ಪ್ರಸಾದ್, ಜೋಗಿ, ಜಿ.ಎನ್.ಮೋಹನ್, ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಭಾಗವಹಿಸಿ ಮಾತನಾಡಿದರು.
ಕವಿ ಜೋಗಿ ಮಾತನಾಡಿ, ಕೇರಳದಲ್ಲಿ ಪುಸ್ತಕ ಮೇಳ ಸಮುದ್ರದ ಬದಿಯಲ್ಲಿ ನಡೆಯುತ್ತಿದೆ, ಒಂಬತ್ತು ವೇದಿಕೆಯಲ್ಲಿ ವಿವಿಧ ಭಾಷೆಗಳ ಸಾಹಿತ್ಯ ಗೋಷ್ಠಿ ನಡೆಯುತ್ತದೆ. ಇಲ್ಲಿ ಹೋದರೆ ಹೊಸ ಸಾಹಿತ್ಯದ ಜಗತ್ತು ತೆರೆದುಕೊಳ್ಳುತ್ತದೆ, ಇಲ್ಲಿಗೆ ಹೋಗಿ ಭೇಟಿ ಕೊಡಿ ಎಂದರು.ಸ್ವಪ್ನ ಬುಕ್ ಹೌಸ್ನ ವ್ಯವಸ್ಥಾಪಕ ಡಾ. ದೊಡ್ಡೆ ಗೌಡ ಮಾತನಾಡಿ, ಹದಿನೈದು ದಿನಗಳ ಕಾಲ ಪುಸ್ತಕ ಸುಗ್ಗಿ ಪ್ರದರ್ಶನ ನಡೆಯಲಿದೆ. ವಿವಿಧ ಲೇಖಕರ,ಕವಿಗಳ ಪುಸ್ತಕಗಳನ್ನು ಕೊಂಡು ಒದಬೇಕು ಪುಸ್ತಕಗಳಿಗೆ ಶೇ10ರಿಂದ50ರವರೆಗೆ ರಿಯಾಯಿತಿ ನೀಡಲಾಗಿದೆ ಎಂದರು.