ಬಾಗೇಪಲ್ಲಿ: ಹನುಮನ್ ವ್ರತದ ಪ್ರಯುಕ್ತ ಪಟ್ಟಣದ ಶ್ರೀ ಬೈಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಎರಡು ದಿನಗಳಿಂದ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲಾಗಿತ್ತು.ಎರಡನೆ ದಿನವಾದ ಇಂದು ತೈಲಭಿಷೇಕ, ತುಪ್ಪದ ಅಭಿಷೇಕ ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ನೇರವೇರಿಸಲಾಯಿತು.ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀ ಶೇಷಾದ್ರಿ ಸ್ವಾಮಿಗಳು ಮಾತನಾಡಿ ಪೂಜೆ ಮಾಡಲು ನಿರ್ದಿಷ್ಟ ಪ್ರದೇಶ, ಯೋಗ, ಶ್ರೇಷ್ಠ ಕಾಲ ಇರಬೇಕು.
ಈ ಕಾಲದಲ್ಲಿ ನಡೆಸುವ ಪೂಜೆಗಳಿಂದ ಮೋಕ್ಷ ಸಿಗುತ್ತದೆ. ಇತ್ತೀಚಿಗೆ ಅಷ್ಟೇ ಹನುಮ ಜಯಂತಿ ಆಚರಣೆ ಮಾಡಲಾಗಿದ್ದು, ವಾಯು ದೇವರಿಗೆ ಇರುವ ಹನುಮದ್ ವ್ರತ ವನ್ನು ಆಚರಣೆ ಮಾಡುವುದು ಪುಣ್ಯದ ಕೆಲಸ ಆಗಿದೆ. ವಾಯು ದೇವರಿಗೆ ಶ್ರಮ ಎಂಬುದೇ ಇಲ್ಲ. ಸಂಜೀವಿನಿ ಪರ್ವತವನ್ನೇ ಎತ್ತುಕೊಂಡು ಬಂದ ವಾಯು ದೇವರು ಅನಯಾಸವಾಗಿ ತಂದ ಸ್ವಾಮಿಗೆ ಯಾವುದೇ ಶ್ರಮ ಎಂಬುದೇ ಕಂಡು ಬಂದಿಲ್ಲ ವಂತೆ. ಅಂತಹ ಶ್ರೇಷ್ಠವಾದ ವಾಯುದೇವರ ಪೂಜೆ ಸಲ್ಲಿಕೆ ಮಾಡುವುದು ನಮ್ಮ ಸುಕೃತವೇ ಸರಿ ಎಂದು ತಿಳಿಸಿದರು.
ಇನ್ನೂ ಶ್ರೀ ಹನುಮ ದೇವರ ಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಅಲ್ಲದೆ ಪೂಜೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಎರಡು ದಿನಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ತೀರ್ಥ ಪ್ರಸಾದ ಪಡೆದು ಪುನೀತರಾದರು.