ಯಲಹಂಕ: ಆರೋಗ್ಯ ಹಾಗೂ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಪಾದಕರ ಮತ್ತು ವರದಿಗಾರರ ಸಂಘ ದಿನಾಂಕ 9.1.2025 ಗುರುವಾರದಂದು ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಹಿರಿಯ ಪತ್ರಕರ್ತ ರಾಮಾಂಜನಪ್ಫ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಲು ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ(ರಿ)ದ ಸಂಸ್ಥಾಪಕ ಅಧ್ಯಕ್ಷರಾದ ಕಲಾವಿದ ವಿಷ್ಣು, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಇ.ಎಸ್ ವಿಶ್ವನಾಥ್, ಖಜಾಂಚಿ ಮುನಿರಾಜು, ಕಾರ್ಯದರ್ಶಿ ಸುಮಾ ಪುರುಷೋತ್ತಮ,ಸಹ ಕಾರ್ಯದರ್ಶಿ ಚೇತನ್ ಬಾಬು, ಬೆಂಗಳೂರು ಜಿಲ್ಲಾಧ್ಯಕ್ಷ ಉಮೇಶ್, ತಿಪಟೂರು ಘಟಕದ ಶುಭ ವಿಶ್ವಕರ್ಮ ಕೋಲಾರ ಜಿಲ್ಲಾ ಘಟಕದ ಗುಟ್ಟಳ್ಳಿ ಶ್ರೀನಿವಾಸ್, ಅನಿಲ್, ಮುಂತಾದವರು ತುಮಕೂರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು.
ಭೇಟಿ ನೀಡಿ ಆರೋಗ್ಯ ವಿಚಾರಿಸಿ ರಾಮಾಂಜನಪ್ಪನವರ ಪ್ರಕರಣದ ಹಿನ್ನೆಲೆಯನ್ನು ಸಂಸ್ಥಾಪಕ ಅಧ್ಯಕ್ಷರಾದ ಕಲಾವಿದ ವಿಷ್ಣು ಹಾಗೂ ಪ್ರಧಾನ ಕಾರ್ಯದರ್ಶಿ ಇ.ಎಸ್ .ವಿಶ್ವನಾಥ್ ವಿಚಾರಿಸಲಾಗಿ ಪತ್ರಕರ್ತ ರಾಮಾಂಜನಪ್ಪ ಅವರು ನಡೆದ ಘಟನೆಯನ್ನು ಸವಿವರವಾಗಿ ವಿವರಿಸಿದರು. ಗಾಯಾಳು ವಿನಿಂದ ವಿಷಯ ಸಂಗ್ರಹಿಸಿದ ಕೇರಾ ತಂಡ ದವರು ಚಿಕಿತ್ಸೆ ಸಿಗದೇ ಆಸ್ಪತ್ರೆಯಲ್ಲಿದ್ದ ರಾಮಾಂಜನಪ್ಪ ಅವರ ಆರೋಗ್ಯ ಸುಧಾರಿಸುವಲ್ಲಿ ಆಸ್ಪತ್ರೆಯ ವೈದ್ಯರುಗಳು ಹೆಚ್ಚಿನ ಮಟ್ಟದ ಚಿಕಿತ್ಸೆ ನೀಡಿ, ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿರುವ ಅವರ ಕಣ್ಣನ್ನು ಸಹಜ ಸ್ಥಿತಿಗೆ ತರುವಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಬೇಕಾಗಿ ಹಿರಿಯ ಆರೋಗ್ಯ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಪತ್ರಕರ್ತರ ಮನವಿಗೆ ಸ್ಪಂದಿಸಿದ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಪತ್ರಕರ್ತರಿಗೆ ಭರವಸೆ ನೀಡಿದರು.
ನಂತರ ತುಮಕೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು ಹಾಗೂ ಪತ್ರಕರ್ತ ರಾಮಾಂಜನಪ್ಪ ಅವರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡಬೇಕಾಗಿ ಕೋರಿದರು ಸ್ಪಂದಿಸಿದ ಶ್ರೀಯುತರು ಮುಂದಿನ ಕ್ರಮದ ಬಗ್ಗೆ ಭರವಸೆ ನೀಡಿ ಸ್ಥಳದಲ್ಲೇ ಇದ್ದ ಅಧಿಕಾರಿಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಲು ಆದೇಶಿಸಿದರು.
ಪ್ರಾಮಾಣಿಕ ಪತ್ರಕರ್ತನಾಗಿ ನೈಜ ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಪತ್ರಕರ್ತ ರಾಮಾಂಜನಪ್ಪ ಅವರಿಗೆ ಈ ಸ್ಥಿತಿಗೆ ದುಷ್ಕರ್ಮಿಗಳಿಂದ ಮತ್ತೆ ಇವರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕಾಗಿ ಸಂಘಟನೆಯ ಪದಾಧಿಕಾರಿ ಮುಖಂಡರು ಪೊಲೀಸ್ ಅಧೀಕ್ಷಕರಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಮೇಲಾಧಿಕಾರಿಗಳು ಧೈರ್ಯದಿಂದಿರಿ ಏನು ಆಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದಿರುತ್ತಾರೆ.