ಮಾಲೂರು: ದೇಶದಲ್ಲಿ ಹಳ್ಳಿಯ ಕಟ್ಟಕಡೆಯ ಪ್ರಜೆ ಸೇವೆಮಾಡುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರ ಸೇವಾ ಸೌಲಭ್ಯಗಳನ್ನು ಒದಗಿಸಬೇಕೆಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಮುನೇಗೌಡ ಒತ್ತಾಯ ಮಾಡಿದರು.
ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರತ್ ರವರ ನೇತೃತ್ವದಲ್ಲಿ ಪಟ್ಟಣದ ಡಾ. ಬಿ ಅರ್ ಅಂಬೇಡ್ಕರ್ ರವರ ಉದ್ಯಾನ ವನದಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿದರು.ಡಾ ಬಿ ಅರ್ ಅಂಬೇಡ್ಕರ್ ರವರು ಬರೆದಿರುವ ಭಾರತದ ಸಂವಿಧಾನದಡಿಯಲ್ಲಿ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕು ಮತ್ತು ಸೇವಾ ಸೌಲಭ್ಯಗಳನ್ನು ಪಡೆಯುವ ಹಕ್ಕಿದೆ, ಅದರಂತೆ ಹಲವರು ಒತ್ತಡಗಳ ಮಧ್ಯೆ ಸಾರ್ವಜನಕರ ಸೇವೆ ಮಾಡುವ ಅಧಿಕಾರಿಗಳಿಗೂ ಸೇವಾ ಕೆಲಸಕ್ಕೆ ತಕ್ಕಂತೆ ಮೂಲ ಭೂತ ಮತ್ತು ಸೇವಾ ಸೌಲಬ್ಯಗಳನ್ನು ಆಯಾ ಆಡಳಿತ ಸರ್ಕಾರಗಳು ನೀಡಬೇಕು ಎಂದು ಹೇಳಿದರು.
ಪ್ರತಿ ಗ್ರಾಮದಲ್ಲಿ ಕಟ್ಟಕಡೆಯ ವ್ಯಕ್ತಿಯ ಸರ್ಕಾರಿ ಸೌಲಭ್ಯಕ್ಕೆ ಸ್ಪಂದಿಸುವ ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಂದು ಕಚೇರಿ ಇಲ್ಲ ಸರಿಯಾದ ಮೂಲ ಭೂತ ಸೌಲಬ್ಯಗಳಿಲ್ಲ ಈಗ ಹಲವಾರು ತಾಂತ್ರಿಕ ಆಪ್ ವ್ಯವಸ್ಥೆಯಲ್ಲಿ ಪ್ರತಿಯೊಂದು ಮಾಹಿತಿ ಸಂಗ್ರಹಣೆ ಸರ್ಕಾರಕ್ಕೆ ಕಳುಹಿಸುವ ಕೆಲಸ ಮಾಡಬೇಕು ಅದಕ್ಕೆ ತಕ್ಕಂತೆ ಸೌಲಬ್ಯಗಳನ್ನು ಸರ್ಕಾರ ಅವರಿಗೆ ಒದುಗಿಸಬೇಕು ಎಂದು ಒತ್ತಾಯ ಮಾಡಿದರು. ಗ್ರಾಮ ಆಡಳಿತ ಅಧಿಕಾರಿಗಳ ತಾಲ್ಲೂಕು ಅಧ್ಯಕ್ಷ ಶರತ್ ಮಾತನಾಡಿ ರಾಜ್ಯ ಅಧ್ಯಕ್ಷರ ಆದೇಶ ಮೇರಿಗೆ ತಾಲ್ಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಪದಾಧಿಕಾರಿಗಳು ಸೇರಿ ತಾಲ್ಲೂಕು ಕಚೇರಿ ಮುಂದೆ ಯಿಂದ ಮೆರವಣಿಗೆ ಮೂಲಕ ಬಂದು ಡಾ ಬಿ ಅರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ದಡಿಯಲ್ಲಿ ನಮ್ಮ ಮೂಲಭೂತ ಮತ್ತು ಸೇವಾ ಹಕ್ಕುಗಳಿಗಾಗಿ ನಮ್ಮ ಬೇಡಿಕೆಗಳು ಇಡೇರುವವರಿವಿಗೂ ಅನಿರ್ಧಿಷ್ಟ ಕಾಲ ಮುಷ್ಕರವನ್ನು ಹಮ್ಮಿ ಕೊಂಡಿದ್ದೇವೆ.
ಗ್ರಾಮ ಲೆಕ್ಕಿಗರು ಪ್ರತಿ ಹಳ್ಳಿಗೂ ಭೇಟಿ ನೀಡಿ ಫೇನ್, ಬುಕ್ ಪೇಪರ್ ಹಿಡಿದು ಮಾಹಿತಿ ಪಡೆದು ಸಾರ್ವಜನಿಕರ ಸೇವೆ ಜೊತೆಗೆ ಈಗ ತಾಂತ್ರಿಕ ಸೇವಾ ಅಫ್ ಮೂಲಕ ಕೆಲಸ ಮಾಡಬೇಕು ಎಂಬ ಸರ್ಕಾರ ಆದೇಶ ಮಾಡಿದ್ದೂ ಕೆಲಸಕ್ಕೆ ತಕ್ಕ ಸೇವಾ ಸೌಲಭ್ಯ ಹಾಗೂ ಮೂಲ ಭೂತ ಸೌಕರ್ಯಗಳು ಮಹಿಳಾ ನೌಕರರಿಗೆ ಸೌಕರ್ಯ ಸೇರಿದಂತೆ ಹಲವಾರು ಬೇಡಿಕೆಗಳನ್ನು ಹಿಡೇರುವವರಿಗೂ ಅನಿರ್ಧಿಷ್ಠ ಕಾಲ ಮುಷ್ಕರ ರಾಜ್ಯದ್ಯಾoತ ತಾಲ್ಲೂಕು,ಜಿಲ್ಲಾ ಮಟ್ಟದಲ್ಲಿ ಹಮ್ಮಿ ಕೊಡಿದ್ದೇವೆ ಎಂದು ಹೇಳಿದರು.
ಸ್ಥಳಕ್ಕೆ ಗ್ರೇಡ್ 2 ತಶೀಲ್ದಾರ್ ಹರಿಪ್ರಸಾದ್ ಭೇಟಿ ನೀಡಿ ಮನವಿಯನ್ನು ಸ್ವೀಕರಿಸಿ ತಮ್ಮಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಶಿರಸ್ತೇದಾರ್ ಹರಿ ಪ್ರಸಾದ್,ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ರಾಹುಲ್, ಗೌರವಾಧ್ಯಕ್ಷ ಆರ್ ಲೋಕೇಶ್, ರಾಜ್ಯ ಪರಿಷತ್ ಸದಸ್ಯ ವಿನಯ್,ಉಪಾಧ್ಯಕ್ಷ ಸ್ವಾತಿ,ಖಜಂಚಿ,ರಾಹುಲ್, ಶಿಲ್ಪಾ ರಾಣಿ, ಸುರೇಶ್, ಭಾನುಪ್ರಿಯ, ಮೀನಾ, ದರ್ಶಿನಿ,ವಂದನಾ, ಮಮತಾ, ವಿಜಯ್, ರೂಪೇಂದ್ರ, ಮಧು, ದೀಪಕ್ ಇದ್ದರು.