ಬೆಂಗಳೂರು: ಗೋವಿನ ಕೆಚ್ಚಲನ್ನು ಕತ್ತರಿಸಿ ಪರಾರಿಯಾಗಿದ್ದ ಆರೋಪಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿರುತ್ತಾರೆ.ಶನಿವಾರ ರಾತ್ರಿ ವಿನಾಯಕ ನಗರದಲ್ಲಿ ಈ ಘಟನೆ ಜರುಗಿತ್ತು. ಕಾಟನ್ ಪೇಟೆ ಪೊಲೀಸರು ರಸ್ತೆಯ ಅಕ್ಕ ಪಕ್ಕದಲ್ಲಿ ಅಳವಡಿಸಿದ್ದ ಸಿಸಿಟಿವಿ ಗಳನ್ನು ಪರಿಶೀಲಿಸಿದಾಗ ಬಿಹಾರ್ ರಾಜ್ಯದ ಚಂಪಾರಾನ್ ಡಿಸ್ಟ್ರಿಕ್ಟ್ನಾ ಶೇಕ್ ನೆಸ್ರು 30 ವರ್ಷದವನು ಇಂದು ಕಂಡುಬಂದ ಕಾರಣ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಜನವರಿ 24ರ ತನಕ ಒಪ್ಪಿಸಿರುತ್ತಾರೆ.
ಆರೋಪಿಯು ಪ್ಲಾಸ್ಟಿಕ್ ಮತ್ತು ಕಾಟನ್ ಬ್ಯಾಂಕ್ ಫ್ಯಾಕ್ಟರಿಯಲ್ಲಿ ಬ್ಯಾಗ್ ಹೊಲೆಯುವ ಕೆಲಸಕೆ ಸಹಾಯಕನಾಗಿ ಮಾಡುತ್ತಿದ್ದನು.ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯಡಿ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.