ಭಾನುವಾರದ ದಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಘಟಕದ ಸದಸ್ಯರು ಮತ್ತು ಪದಾಧಿಕಾರಿಗಳು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಮಹಾನಗರ ಅಧ್ಯಕ್ಷರಾದ ಪ್ರಸಿದ್ಧ ಹಾಸ್ಯ ಸಾಹಿತಿಗಳಾದ ಶ್ರೀಎಂ ಎಸ್ ನರಸಿಂಹಮೂರ್ತಿಯವರಿಗೆ ತಡವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತ ಕಾರಣ ಅಭಿನಂದಿಸಲು ಅವರ ಮನೆಗೆ ಭೇಟಿ ನೀಡಿದ ಅಭಾಸಾಪ ಬೆಂಗಳೂರು ಜಿಲ್ಲೆಯ ಸದಸ್ಯರು ಮತ್ತು ಪದಾಧಿಕಾರಿಗಳು ಅವರ ಹುಟ್ಟು ಹಬ್ಬ ಮತ್ತು ಪ್ರಶಸ್ತಿ ದೊರೆತ ಸಲುವಾಗಿ ಅಭಿನಂದಿಸಿದರು.
ಅಕ್ಟೋಬರ್ ೨೦ನೇ ತಾರೀಖಿಗೆ ತಮ್ಮ ೭೫ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಿಕೊಂಡ ಶ್ರೀ ಎಂ ಎಸ್ಎನ್ರವರಿಗೆ ೨೦೨೪ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ. ಹಾಸ್ಯ ಪ್ರಪಂಚದಲ್ಲಿ ಅಚ್ಚಳಿಯದೇ ತಮ್ಮ ಅತ್ಯುತ್ತಮ ಸಂಭಾಷಣೆಯಿAದ ೧೨೦೦೦ ಕ್ಕೂ ಹೆಚ್ಚು ಕಂತುಗಳನ್ನು ಪೂರೈಸಿರುವ ಹೆಗ್ಗಳಿಕೆಗೆ ಪಾತ್ರರಾಗಿರುವ ಎಂ ಎಸ್ ಎನ್ ರವರು ತಮ್ಮ ಹಾಸ್ಯದ ಹೊನಲಿನ ಮೂಲಕ ಅನೇಕ ಸಾಮಾಜಿಕ ಸಂದೇಶಗಳನ್ನು ಮತ್ತು ಉತ್ತಮ ಮಟ್ಟದ ಹಾಸ್ಯ ಸಾಹಿತ್ಯವನ್ನು ಕನ್ನಡ ನಾಡಿಗೆ ಕೊಡುಗೆ ನೀಡಿದವರಾಗಿದ್ದಾರೆ. ಅವರಿಗೆ ಪ್ರಶಸ್ತಿ ದೊರೆತ ಶುಭ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.
ಅನೌಪಚಾರಿಕ ಭೇಟಿಯಲ್ಲಿ ಕೂಡ ಅಭಾಸಾಪ, ಬೆಂಗಳೂರು ಮಹಾನಗರ ಘಟಕದ ಕಾರ್ಯಗಳ ಬಗ್ಗೆ ಔಪಚಾರಿಕವಾಗಿ ಚರ್ಚಿಸಲಾಯಿತು. ಅಭಾಸಾಪ ರಾಜ್ಯ ಖಜಾಂಚಿಗಳಾದ ಶ್ರೀ ವಿಜಯ ಭಾರತೂರ್ ಮತ್ತು ಅವರ ಶ್ರೀಮತಿ ನಳಿನಿಯವರು ಬೆಂಗಳೂರು ಉತ್ತರ ಮಹಿಳಾ ಪ್ರಕಾರದ ಅಧ್ಯಕ್ಷ ರು, ಬೆಂಗಳೂರು ಮಹಾನಗರ ಸಂಯೋಜಕರಾದ ಶ್ರೀ ಚಂದ್ರಶೇಖರ್ ಮೈಸೂರು, ಕಾರ್ಯದರ್ಶಿಗಳಾದ ವಿಕ್ರಮವಾರ ಪತ್ರಿಕೆಯ ಸಂಪಾದಕರೂ ಆದ ಶ್ರೀ ರಮೇಶ ದೊಡ್ಡಪುರರವರು, ಬೆಂಗಳೂರು ಉತ್ತರ ಕಾರ್ಯದರ್ಶಿ ಗಳಾದ ಸಚಿನ್ ಮುಂಗಿಲ ಮತ್ತು ವಿದ್ಯಾರಣ್ಯಪುರ ಘಟಕದ ಶ್ರೀ ಗಂಗಾ ಪ್ರಸಾದ್, ಬೆಂಗಳೂರು ಮಹಿಳಾ ಪ್ರಕಾರ ಉತ್ತರದ ಕಾರ್ಯದರ್ಶಿಗಳಾದ ಶ್ರೀಮತಿ ಜ್ಯೋತಿ ಪ್ರಸಾದ್ ಮತ್ತು ಬೆಂಗಳೂರು ದಕ್ಷಿಣ ಮಹಿಳಾ ಪ್ರಕಾರದ ಕಾರ್ಯದರ್ಶಿ ಶ್ರೀಮತಿ ಮಾಧುರಿ ದೇಶಪಾಂಡೆ ಉಪಸ್ಥಿತರಿದ್ದರು.
ಮನೆಗೆ ಬಂದ ಎಲ್ಲರಿಗೂ ಪುಸ್ತಕ ತಾಂಬೂಲವನ್ನು ಶ್ರೀಎಂ ಎಸ್ ನರಸಿಂಹಮೂರ್ತಿಯವರು ನೀಡಿದರು. ಅವರ ಶ್ರೀಮತಿಯವರು ಕೂಡ ಎಲ್ಲರಿಗೂ ಆತ್ಮೀಯವಾಗಿ ಬರಮಾಡಿ ಕೊಂಡು ಪ್ರೀತಿಯ ಆತಿಥ್ಯ ನೀಡಿದರು. ೧ಗಂಟೆಗೂ ಹೆಚ್ಚು ಕಾಲ ತಮ್ಮ ಅಮೂಲ್ಯ ಸಮಯವನ್ನು ತಮ್ಮ ಅನುಭವಗಳು ಹಾಗೂ ಸಾಹಿತ್ಯದ ಕುರಿತಾದ ಚರ್ಚೆಗಳ ಮೂಲಕ ಶ್ರೀ ಎಂ ಎಸ್ ಎನ್ ದಂಪತಿಗಳು ಅಭಾಸಾಪ ಸದಸ್ಯರೊಂದಿಗೆ ಅವಿಸ್ಮರಣೀಯ ಭೇಟಿ ಇದಾಗಿತ್ತು.
-ಮಾಧುರಿ ದೇಶಪಾಂಡೆ, ಬೆಂಗಳೂರು