ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯ ವತಿಯಿಂದ ಈ ದಿನ ಹಿರಿಯ ನಾಗರಿಕರ ಹಿತರಕ್ಷಣ ಸಮಿತಿಯನ್ನು ಪ್ರಾರಂಭಿಸಲಾಯಿತು. ವನಕಲ್ಲು ಮಲ್ಲೇಶ್ವರ ಮಠದ ಪೀಠಾಧ್ಯಕ್ಷ ಬಸವ ರಮಾನಂದ ಮಹಾಸ್ವಾಮಿಜಿಗಳು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ನ ರಾಜ್ಯಾಧ್ಯಕ್ಷ ಟಿ.ಶಿವಕುಮಾರ್ ನಾಗರ ನವಿಲೇ ಅವರು, ವಿ.ಆಶಾ ಅವರನ್ನು ಹಿರಿಯ ನಾಗರೀಕರ ಹಿತರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿ ಅಭಿನಂದಿಸಿ ಗೌರವಿಸಿ ಈ ದಿನಗಳಲ್ಲಿ ಹಿರಿಯ ನಾಗರಿಕರು ಯಾವ ರೀತಿ ಶೋಷಣೆಗೊಳದಾಗುತ್ತಿದ್ದಾರೆ ಎಂಬುದನ್ನು ವಿವರಿಸಿ ಹಿರಿಯ ನಾಗರಿಕರಿಗೆ ಬೆಂಬಲವಾಗಿ ನಿಲ್ಲುವುದು ಸಂಸ್ಥೆಯ ಉದ್ದೇಶವಾಗಿದೆ ಹಾಗೂ ಅನ್ಯಾಯಕ್ಕೊಳ್ಳಗಾಗಿರುವ ಹಿರಿಯ ನಾಗರಿಕರುಗಳಿಗೆ ಬೆಂಬಲವಾಗಿ ನಮ್ಮ ಸಂಸ್ಥೆ ಸದಾ ಇರುತ್ತದೆ ಎಂದರು.
ಕೆಪಿಸಿಸಿ ಗಲ್ಫ್ ಅಧ್ಯಕ್ಷರಾದ ಸಾಧನ್ ದಾಸ್ ರವರು ಆದೇಶ ಪತ್ರ ನೀಡಿ ಅಭಿನಂದಿಸಿ ಯಾವಾಗಲೂ ನಮ್ಮ ಸಹಕಾರ ಇರುತ್ತದೆ ಎಂದರು.ಕೆಪಿಸಿಸಿ ಸಂಸ್ಥೆಯ ಮುಖಂಡರಾದ ದಿನೇಶ್ ಜೋಶಿ ಅಬಸೆ ಪ್ರಮಾಣವಚನವನ್ನು ಬೋಧಿಸಿ ನಂತರ ಮಾತನಾಡಿ ಈ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿದ್ದು ಹಿರಿಯರಿಗೆ ಮಕ್ಕಳಿಂದ ಆಗುತ್ತಿರುವ ತೊಂದರೆ ವಿವರಿಸಿ ಸಮಾಜವನ್ನು ವೃದ್ಧಾಶ್ರಮ ಮುಕ್ತ ಮಾಡಬೇಕು ಎಂದರು.
ಇದೇ ವೇಳೆ ಮಾತನಾಡಿದ ಕಾನೂನು ಸಲಹೆಗಾರರಾದ ಶ್ರೀನಿವಾಸ್ ಗೌಡರು ಕಾನೂನು ವಿಭಾಗಕ್ಕೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿ ಈ ಸಂಸ್ಥೆಯು ಮಾಡುತ್ತಿರುವ ಎಲ್ಲಾ ಒಳ್ಳೆಯ ಕೆಲಸಗಳಿಗೆ ನಿಮ್ಮ ಜೊತೆ ಇರುತ್ತೇನೆ ಎಂದರು. ಮಹಿಳಾ ಘಟಕದ ಅಧ್ಯಕ್ಷರಾದ ಮೀನಾ ರಾಜ್ ಗೌಡ, ಯುವ ಘಟಕದ ಅಧ್ಯಕ್ಷರಾದ ಗುರುರಾಜ್, ದುಬೈನ ಮಂಜುನಾಥ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರುಪಕರಾದ ಸವಿಪ್ರಕಾಶ್ ಹಾಗೂ ಧನಂಜಯ ರವರು ನಿರೂಪಣೆ ಮಾಡಿದರು.