ಬೆಂಗಳೂರು: ಬಸವೇಶ್ವರನಗರದ ಹಿರಿಯ ನಾಗರಿಕರ ಕೇಂದ್ರದ ಸಭಾಂಗಣದಲ್ಲಿ ಋತು ಸೌರಭ ಫೌಂಡೇಷನ್ ಏರ್ಪಡಿಸಿದ್ದ ಕನ್ನಡ ಸೌರಭ ಸಂಭ್ರಮ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೇಮಾ ಭಟ್ ಅವರ ‘ಅಮ್ಮನ ನುಡಿಗಳು’ ಕೃತಿಯನ್ನು ಕರ್ನಾಟಕ ಲೇಖಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷೆ ವನಮಾಲ ಸಂಪನ್ನ ಕುಮಾರ್ ಅವರು ಬಿಡುಗಡೆ ಮಾಡಿದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಪತ್ರಿಕೋದ್ಯಮದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ನಾಡೋಜ ಎಸ್ ಷಡಕ್ಷರಿ ಅವರು ಅಧ್ಯಕ್ಷತೆ ವಹಿಸಿದ್ದರು, ಲೇಖಕರೂ ಪತ್ರಕರ್ತರೂ ಆದ ಭಾಗ್ಯಲಕ್ಷ್ಮಿ ಮಗ್ಗೆ ಅವರು ಕೃತಿ ಪರಿಚಯ ಮಾಡಿದರು. ಋತುಸೌರಭ ಫೌಂಡೇಷನ್ ಅಧ್ಯಕ್ಷೆ ವಿಜಯಲಕ್ಷ್ಮಿ ಸತ್ಯಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹತ್ತು ಜನ ಕವಿಗಳು ಚುಟುಕುಗಳನ್ನು ವಾದಿಸಿದರು.ಕಾರ್ಯಕ್ರಮದಲ್ಲಿ ಲೇಖಕಿ ಪ್ರೇಮಾ ಭಟ್, ಶೈಲಸುತೆ ರಂಜಿತಾ, ಕು. ಪ್ರಣತಿ, ಪ್ರವೀಣಾ ಕುಲಕರ್ಣಿ, ಬಾಲಾಜಿ ರಾವ್ ಮತ್ತಿತರರು ಉಪಸ್ಥಿತರಿದ್ದರು.