ಹುಣಸಗಿ: ಪಟ್ಟಣದ ಪ್ರಸಿದ್ಧ ಹಳ್ಳದ ಹನುಮಾನ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಹಾಗೂ ಎಂಟನೇ ವರ್ಷದ ಪಲ್ಲಕ್ಕಿ ಉತ್ಸವ ಶನಿವಾರದಂದು ಬೆಳಗ್ಗೆಯಿಂದ ನಡೆಯಲಿದೆ ಎಂದು ಉತ್ಸವ ಸಮೀತಿಯ ಆನಂದ ಬಾರಿಗಿಡದ ಹೇಳಿದರು.
ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ಜಾವದವರೆಗೂ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಸಾಮೂಹಿಕ ಭಜನೆ ಹಾಗೂ ರಾಮ ನಾಮ ಸ್ಮರಣೆ ಕಾರ್ಯಕ್ರಮ ಜರುಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಶನಿವಾರ ಬೆಳಿಗ್ಗೆ ಆಂಜನೇಯ ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವವು ಹೊರ ಅಗಸಿಯ ಮೂಲಕ ಗ್ರಾಮದೇವತೆ ಕಟ್ಟೆ, ನೀಲಕಂಠೇಶ್ವರ ದೇವಸ್ಥಾನ ಮಾರ್ಗವಾಗಿ ಹಾಗೂ ವಾಲ್ಮೀಕಿ ನಗರದ ಮೂಲಕ ಮರಳಿ ದೇವಸ್ಥಾನಕ್ಕೆ ಆಗಮಿಸಲಿದೆ.
ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವವು ಬಂದ ನಂತರ ಹನುಮಂತ ದೇವರಿಗೆ ಪಂಚಾಮೃತ ಅಭಿಷೇಕ, ಅಲಂಕಾರ ಮಹಾ ಮಂಗಳಾರುತಿ ಕಾರ್ಯಕ್ರಮ ಹಾಗೂ ವಿಶೇಷ ಪೂಜೆ ನೆರವೆರುವುದು.ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮಹಾ ಪ್ರಸಾದ ನಡೆಯಲಿದೆ. ಈ ಒಂದು ಹಳ್ಳದ ಹನುಮಾನ ದೇವಸ್ಥಾನದ ಕಾರ್ತಿಕೋತ್ಸವ ಹಾಗೂ ಪಲ್ಲಕಿ ಉತ್ಸವ ಕಾರ್ಯಕ್ರಮದಲ್ಲಿ ಪಟ್ಟಣದ ಸಮಸ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹನುಮನ ದರ್ಶನ ಪಡೆದು ಪುನಿತರಾಗಬೇಕೆಂದು ತಿಳಿಸಿದರು.ಈ ವೇಳೆ ಅರ್ಚಕರಾದ ವೆಂಕಟೇಶ ಅರಳಿಗಿಡ, ವೀರಭದ್ರಪ್ಪ ಹೂಗಾರ, ಮುತ್ತು ಜಂಬಲದಿನ್ನಿ, ನಂದುಲಾಲ್ ಠವಾಣಿ ಹಾಜರಿದ್ದರು.