ಈ ವಾರ ಕನ್ನಡದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ ಅಂಬರೀಶ ನಿರ್ದೇಶನದ ‘ನಾಟ್ ಔಟ್’ ಪ್ರೇಕ್ಷಕರ ಮನಗೆದ್ದಿದೆ. ವಿಭಿನ್ನ ಟೈಟಲ್ನಿಂದ ಸಿನಿಮಾ ಗಮನ ಸೆಳೆದಿತ್ತು. ‘ಅದೃಶ್ಯ ಅಂಪೈರ್ನಿಂದ ತೀರ್ಪು’ ಎಂಬ ಅಡಿಬರಹ ಮತ್ತಷ್ಟು ಕುತೂಹಲ ಹುಟ್ಟಿಸಿತ್ತು. ಇದೀಗ ಡಾರ್ಕ್ ಕಾಮಿಡಿ ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತಿದೆ.
ರವಿಶಂಕರ್ , ಅಜಯ್ ಪೃಥ್ವಿ, ರಚನಾ ಇಂದರ್, ಕಾಕ್ರೋಚ್ ಸುಧೀ, ಗೋಪಲಕೃಷ್ಣ ದೇಶ್ಪಾಂಡೆ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹೊಸಬರ ಜೊತೆಗೆ ಅನುಭವಿ ಕಲಾವಿದರ ಬಲ ಚಿತ್ರಕ್ಕೆ ಸಿಕ್ಕಿದೆ. ಜುಡಾ ಸ್ಯಾಂಡಿ ಸಂಗೀತ, ಹಾಲೇಶ್ ಛಾಯಾಗ್ರಹಣ ಚಿತ್ರಕ್ಕಿದೆ.ಅಧಿಕಾರ ಹಾಗೂ ದುರಾಸೆಗಿಂತ ಮಾನವೀಯತೆ ಎಷ್ಟು ಮುಖ್ಯ ಎನ್ನುವುದನ್ನು ‘ನಾಟ್ಔಟ್’ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ.
ತಮಾಷೆಯಾಗಿ ಗಂಭೀರ ವಿಚಾರವನ್ನು ದಾಟಿಸುವ ಪ್ರಯತ್ನ ಮಾಡಲಾಗಿದೆ. ‘ನಾಟ್ ಔಟ್’ ಸಿನಿಮಾ ಕಥೆ ಫೈನಾನ್ಶಿಯರ್ ಕಂ ರೌಡಿ ದೇವರಾಜ್(ರವಿ ಶಂಕರ್) ಸುತ್ತಾ ‘ನಾಟ್ಔಟ್’ ಸಿನಿಮಾ ಕಥೆ ಸುತ್ತುತ್ತದೆ. ಹಣಕ್ಕಾಗಿ ದೇವರಾಜ್ ಸಾಲು ಪಡೆದವರನ್ನು ಯಾವುದೇ ಕನಿಕರ ಇಲ್ಲದೇ ದೋಚುತ್ತಿರುತ್ತಾನೆ. ನಾಯಕ ಅಜಯ್ ಆ್ಯಂಬ್ಯುಲೆನ್ಸ್ ಚಾಲಕ. ಸ್ವಂತ ಆ್ಯಂಬ್ಯುಲೆನ್ಸ್ ಖರೀದಿಸಲು ದೇವರಾಜ್ ಬಳಿ ಸಾಲ ಮಾಡುತ್ತಾನೆ. ಅವನ ದುರಾದೃಷ್ಟಕ್ಕೆ ಆ್ಯಂಬ್ಯುಲೆನ್ಸ್ ಕಳ್ಳತನವಾಗುತ್ತದೆ.