ಮೈಸೂರು: ಸೆ.29 ರಂದು ಆಚರಿಸಲ್ಪಡುವ ವಿಶ್ವ ಹೃದಯ ದಿನಾಚರಣೆಯ ದೃಷ್ಟಿಯಿಂದ, ಮಣಿಪಾಲ್ ಆಸ್ಪತ್ರೆ ಮೈಸೂರು, ಹೃದ್ರೋಗ ತಡೆಗಟ್ಟುವಿಕೆಯ ಅರಿವನ್ನು ಮೂಡಿಸಲು ತಜ್ಞರ ನೇತೃತ್ವದಲ್ಲಿ ಸಾರ್ವಜನಿಕ ವೇದಿಕೆಯನ್ನು ಆಯೋಜಿಸುವ ಮೂಲಕ, ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವತ್ತ ಮಹತ್ವದ ದಾಪುಗಾಲು ಹಾಕಿದೆ.
ಸೆಪ್ಟೆಂಬರ್ 22, 2024 ರಂದು ನಡೆದ ಈ ಕಾರ್ಯಕ್ರಮವು, ಈ ವರ್ಷದ ವಿಶ್ವ ಹೃದಯ ದಿನದ ಥೀಮ್ “ಯೂಸ್ ಹಾರ್ಟ್ ಫಾರ್ ಆಕ್ಷನ್” ನೊಂದಿಗೆ ಪೂರಕವಾಗಿತ್ತು. ಪ್ರಮುಖ ತಜ್ಞರಿಂದ ಹೃದಯದ ಆರೋಗ್ಯದ ಬಗ್ಗೆ ತಿಳಿಯಲು ಉತ್ಸುಕರಾಗಿರುವ ಹೆಚ್ಚಿನ ಪ್ರೇಕ್ಷಕರನ್ನು ಈ ಕಾರ್ಯಕ್ರಮವು ಆಕರ್ಷಿಸಿತು.
ವೇದಿಕೆಯಲ್ಲಿ ಡಾ.ಉಪೇಂದ್ರ ಶೆಣೈ – ಹೃದಯರಕ್ತನಾಳದ ಶಸ್ತ್ರಚಿಕಿತ್ಸಕ ಮತ್ತು ವೈದ್ಯಕೀಯ ಸೇವೆಗಳ ಮುಖ್ಯಸ್ಥರು, ಮಣಿಪಾಲ್ ಆಸ್ಪತ್ರೆ ಮೈಸೂರು, ಮತ್ತು ಮಣಿಪಾಲ್ ಹಾಸ್ಪಿಟಲ್ ಮೈಸೂರಿನ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಸಲಹೆಗಾರರಾದ ಡಾ. ಕೇಶವಮೂರ್ತಿ ಸಿಬಿ, ಡಾ. ಶರತ್ ಬಾಬು ಎನ್.ಎಂ, ಹೆಸರಾಂತ ಹೃದ್ರೋಗ ತಜ್ಞರು ಉಪಸ್ಥಿತರಿದ್ದರು.
ಡಾ.ಉಪೇಂದ್ರ ಶೆಣೈ ಅವರು, ಒಟ್ಟಾರೆ ಯೋಗಕ್ಷೇಮ ಮತ್ತು ಹೃದಯದ ಆರೋಗ್ಯದ ಮಹತ್ವವನ್ನು ಒತ್ತಿ ಹೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು. “ಆರೋಗ್ಯಕರ ಅಭ್ಯಾಸಗಳು ಅಥವಾ ಆರೋಗ್ಯಕರ ಜೀವನಶೈಲಿಯುಆರೋಗ್ಯಕರ ಹೃದಯಕ್ಕೆ ಸಮಾನವಾಗಿದೆ” ಎಂದು ಅವರು ಹೇಳಿದರು ಮತ್ತು ಹೃದ್ರೋಗವನ್ನು ತಡೆಗಟ್ಟುವ ಸಾಧನವಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪಾಲ್ಗೊಳ್ಳುವವರನ್ನು ಒತ್ತಾಯಿಸಿದರು.