ಬೆಂಗಳೂರು: ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾದ ಮೇಲೆ, ಸರ್ಕಾರ ಪ್ರಾಯೋಜಿತ ಆತ್ಮಹತ್ಯೆಗಳು ನಡೆಯುತ್ತಿದೆ ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಾವುದೇ ಸರ್ಕಾರದಿಂದ ಇಂತಹ ಘಟನೆಗಳು ನಡೆದಿಲ್ಲ.ನಮ್ಮ ರಾಜ್ಯ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ನೋಡಿರಲಿಲ್ಲ.
ಕಳೆದ ಎರಡು ವರ್ಷಗಳಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ನೋಡಲು ಸಿಕ್ಕಿದೆ ಎಂದಿದ್ದಾರೆ.ರಾಜ್ಯ ಸರ್ಕಾರ “ಆತ್ಮಹತ್ಯೆ ಭಾಗ್ಯ” ನೀಡಿದೆ. ಮೊದಲ ಆತ್ಮಹತ್ಯೆ ವಾಲ್ಮೀಕಿ ನಿಗಮದ ಚಂದ್ರಶೇಖರ್. ಇದು ಗೊತ್ತಿದೆ ನಿಮಗೆಲ್ಲಾ. ಯಾರ ಕುಮ್ಮಕ್ಕಿನಿಂದ ಆತ್ಮಹತ್ಯೆ ಆಯಿತು ಎಂಬುದು ಗೊತ್ತಿದೆ. ನವೆಂಬರ್ 20, 2024 ರಂದು ರುದ್ರಣ್ಣ ಎಡವಣ್ಣನವರ್ ಆತ್ಮಹತ್ಯೆ ಮಾಡಿಕೊಂಡ್ರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಕಿರುಕುಳದಿಂದ ಆಗಿದೆ. ಮೂರನೇ ಪ್ರಕರಣ ಪೇಮೆಂಟ್ ಸಿಗದೇ ಕಂಟ್ರಾಕ್ಟರ್ ಆತ್ಮಹತ್ಯೆ ಮಾಡಿಕೊಂಡ್ರು. ಲೋಕಸಭಾ ಚುನಾವಣೆಯ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗಡಿಯಲ್ಲೂ ಆತ್ಮಹತ್ಯೆ ಆಗಿದೆ.
ಯಾದಗಿರಿ ಪೊಲೀಸ್ ಠಾಣೆ ಪರಶುರಾಂ ಸಬ್ ಇನ್ಸ್ಪೆಕ್ಟರ್ ಶಾಸಕನ ಮಗನ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿದ್ದಾರೆ. ಈಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.ಡಿಸೆಂಬರ್ 27 ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ದೇಶಾದ್ಯಂತ ಸುದ್ದಿಯಾಗಿದೆ. ಸಚಿನ್ ಅವರೇ ಬರೆದಿಟ್ಟಿರುವಂತೆ ಡೆತ್ ನೋಟ್ ಸಿಕ್ಕಿದೆ. ಅದರಲ್ಲಿ ಎಲ್ಲಾ ವಿವರವಾಗಿದೆ. ಕಿರುಕುಳ ಸಹಿಸಲಾಗದೇ ಇಂಚಿಂಚೂ ಮಾಹಿತಿ ಬರೆದು ಇಟ್ಟಿದ್ದಾರೆ ಎಂದು ಹೇಳಿದ್ದಾರೆ.