ಬೆಂಗಳೂರು: ಹೊಸ ವರ್ಷದ ಬೆನ್ಬಲ್ಲೇ ಬೆಂಗಳೂರು ನಗರ ಪೊಲೀಸರು ಮತ್ತಷ್ಟು ಚುರುಕುಗೊಂಡಿದ್ದಾರೆ.ಪಂಚತಾರಾ ಹೋಟೆಲ್, ಪಬ್ , ಫಾರ್ಮ್ ಹೌಸ್, ರೆಸಾರ್ಟ್ ಗಳ ಮಾಲೀಕರಿಗೆ ಖಡಕ್ ಸೂಚನೆ ನೀಡುತ್ತಿದ್ದಾರೆ. ಕಳೆದ ಬಾರಿ ರೇಡ್ ಆಗಿದ್ದ ಸ್ಟಾರ್ ಹೋಟೆಲ್ಗಳ ಲಿಸ್ಟ್ ಔಟ್ ಮಾಡಿರುವ ಪೊಲೀಸರು, ಎಲ್ಲಾ ಪಬ್ ಹಾಗೂ ಸ್ಟಾರ್ ಹೋಟೆಲ್ ಗಳಿಗೆ ಭೇಟಿ ನೀಡುತ್ತಿದ್ದಾರೆ.ಪೊ
ಮಾದಕವಸ್ತುಗಳ ವಿಚಾರವಾಗಿ ಹೋಟೆಲ್, ಪಬ್, ಫಾರಂ ಹೌಸ್ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡುತ್ತಿದ್ದಾರೆ.ಸಿನಿಮಾ ನಟ-ನಟಿಯರು, ವಿದೇಶಿಗರು ಹಾಗೂ ರಾಜಕಾರಣಿ ಮಕ್ಕಳು ಪಾರ್ಟಿಗೆ ಬಂದರೆ ಪೊಲೀಸರಿಗೆ ಮಾಹಿತಿ ನೀಡುಲು ಸೂಚಿಸಿದ್ದಾರೆ.
ಯಾರೇ ಬಂದರೂ ಮೂರು ಗಂಟೆಯ ಮೊದಲೇ ಆಯಾ ವ್ಯಾಪ್ತಿಯ ಠಾಣಾ ಪೊಲಿಸರಿಗೆ ಮಾಹಿತಿ ನೀಡುವಂತೆ ತಾಕೀತು ಮಾಡಲಾಗುತ್ತಿದೆ.
ಸೀಮಿತ ಪಾರ್ಟಿ ಸಿಬ್ಬಂದಿಯನ್ನ ಬಿಟ್ಟು ಹೆಚ್ಚುವರಿಯಾಗಿ ಸೇರಿಸಿಕೊಳ್ಳುವಂತಿಲ. ಇದಲ್ಲದೆ ಈ ಹಿಂದೆ ಸಿಕ್ಕಿದ್ದ ಸೆಲಬ್ರೆಟೀಸ್ ಮೇಲೂ ಪೆÇಲೀಸರು ನಿಗಾ ವಹಿಸಿದ್ದಾರೆ.