ಮುಂಬೈ: ಟಿ20 ಅಂತರ ರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತ ರಾಗಿರುವ ಸೀನಿಯರ್ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಬಹುತೇಕ ಏಕದಿನ ಪಂದ್ಯಗಳಿಗೆ ಮತ್ತು ಟೆಸ್ಟ್ಗಳಿಗೆ ಲಭ್ಯರಾಗುತ್ತಾರೆ ಎಂದು ನಿರೀಕ್ಷಿಸಿರುವುದಾಗಿ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ.ದಕ್ಷಿಣ ಆಫ್ರಿಕಾದಲ್ಲಿ ನಿಗದಿಯಾಗಿ ರುವ 2027ರ ಏಕದಿನ ವಿಶ್ವಕಪ್ಗೆ ಪರಿಗಣಿಸುವಂತಾಗಲು ಅವರಿಬ್ಬರೂ ಫಿಟ್ನೆಸ್ ಉಳಿಸಿಕೊಳ್ಳುವ ವಿಶ್ವಾಸ ಹೊಂದಿ ರುವುದಾಗಿಯೂ ಗಂಭೀರ್ ಹೇಳಿದ್ದಾರೆ.
ಟಿ20 ವಿಶ್ವಕಪ್ ಗೆದ್ದ ನಂತರ ಅಂತರ ರಾಷ್ಟ್ರೀಯ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಪಡೆಯುವುದಾಗಿ ಈ ಅನುಭವಿ ಬ್ಯಾಟರ್ಗಳು ಹೇಳಿದ್ದರು. ಇಬ್ಬರೂ ಶ್ರೀಲಂಕಾ ಪ್ರವಾಸಕ್ಕೆ ವಿಶ್ರಾಂತಿ ಪಡೆಯಬಹುದೆಂಬ ನಿರೀಕ್ಷೆಗಳಿದ್ದವು. ಆದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಿನ್ನೆಲೆಯಲ್ಲಿ, ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಮುಂದಿನ ತಿಂಗಳು ದ್ವೀಪರಾಷ್ಟ್ರದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಮುಂದಿನ ಫೆಬ್ರುವರಿ- ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದಲ್ಲಿ ನಿಗದಿ ಆಗಿದೆ.
ಮುಖ್ಯ ಕೋಚ್ ಆದ ನಂತರ ಮೊದಲ ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿದ ಗಂಭೀರ್, ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ಸಂಬಂಧಿಸಿ ಮಾತ್ರ ಕಾರ್ಯಭಾರ ಒತ್ತಡದ ಮಾತುಗಳನ್ನು ಆಡಿದರು. ‘ಬೂಮ್ರಾ ಅಂಥ ಆಟಗಾರರಿಗೆ ಸಂಬಂಧಿಸಿ ಕಾರ್ಯದೊತ್ತಡ ನಿರ್ವಹಣೆ ಮಾಡುವುದು ಮುಖ್ಯವಾಗಿದೆ ಎಂದು ಹಿಂದೆಯೂ ಹೇಳಿದ್ದೇನೆ.
ಸ್ಥಿರ ಪ್ರದರ್ಶನ ನೀಡುವ, ಉತ್ತಮ ಲಯದಲ್ಲಿರುವ ಬ್ಯಾಟರ್ಗಳು ಎಲ್ಲ ಪಂದ್ಯಗಳನ್ನು ಆಡಬೇಕಾಗುತ್ತದೆ’ ಎಂದರು.ರೋಹಿತ್ ಮತ್ತು ವಿರಾಟ್ ಟಿ20 ಕ್ರಿಕೆಟ್ನಿಂದ ನಿವೃತ್ತರಾದ ಕಾರಣ ಅವರಿಗೆ ಎರಡು ಮಾದರಿಗಳಷ್ಟೇ ಉಳಿದಿವೆ. ಅವರಿಬ್ಬರೂ ಬಹುತೇಕ ಪಂದ್ಯಗಳಿಗೆ ಲಭ್ಯರಿರುವ ವಿಶ್ವಾಸವಿದೆ’ ಎಂದು ಗಂಭೀರ್ ಹೇಳಿದರು.
‘ಬೂಮ್ರಾ ಅವರು ವಿರಳ ರೀತಿಯ ಬೌಲರ್. ಹೀಗಾಗಿ ವೇಗದ ಬೌಲರ್ಗಳಿಗೆ ಆಗುವ ರೀತಿ ಅವರು ಗಾಯಾಳಾಗದಂತೆ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕಾಗುತ್ತದೆ. ಬರೇ ಬೂಮ್ರಾ ಮಾತ್ರವಲ್ಲ, ಹೆಚ್ಚಿನ ವೇಗದ ಬೌಲರ್ಗಳ ವಿಷಯದಲ್ಲೂ ಕಾರ್ಯಭಾರ ಹೆಚ್ಚಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ’ ಎಂದರು.