ಬೆಂಗಳೂರು: ಪೊಲೀಸ್ ತನಿಕಾ ಲೋಪದಿಂದಾಗಿ ಕೋರ್ಟ್ ವಿಚಾರಣೆಯಲ್ಲಿ ಖುಲಾಸೆಯಾಗುತ್ತಿರುವ ಅಪರಾಧ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಮತ್ತು ಬೆಂಗಳೂರು ನಗರ ಒಂದರಲ್ಲಿಯೇ ಆನ್ಲೈನ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯ ಜನರನ್ನು ವಂಚಿಸುತ್ತಿರುವ ಪ್ರಕರಣಗಳು ಜಾಸ್ತಿ ಆದ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ರವರು ಇಂದು ಸಂಜೆ ೪ ಗಂಟೆಗೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿರುವ ಸಭಾಂಗಣದಲ್ಲಿ ಎ ಸಿ ಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳ ಸಭೆಯನ್ನು ಹಮ್ಮಿಕೊಂಡಿದ್ದಾರೆ.
ಈ ಸಭೆಯಲ್ಲಿ ನಗರದಲ್ಲಿ ವರದಿಯಾಗಿರುವ ಘೋರ ಅಪರಾಧಗಳ ತನಿಖೆಗಳ ಕುರಿತು ಬೆಂಗಳೂರು ನಗರದ ಎಂಟು ಡಿ ಸಿ ಪಿ ವಿಭಾಗಗಳ ಸೈಬರ್ ಕ್ರೆö ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯ ಜನರಿಗೆ ಆನ್ಲೈನ್ ಮೂಲಕ ವಂಚಿಸಿರುವ ಪ್ರಕರಣಗಳ ತನಿಖೆ ಕುರಿತು ದೀರ್ಘ ಚರ್ಚೆ ನಡೆಸಿ ಆರೋಪಿಗಳ ಪತ್ತೆ ಮತ್ತು ಪರಿಹಾರ ಹಾಗೂ ಪತ್ತೆಯಾಗಿರುವ ಪ್ರಕರಣಗಳ ಆರೋಪಿಗಳ ಶಿಕ್ಷೆ ಬಗ್ಗೆ ನ್ಯಾಯಾಲಯದಲ್ಲಿ ಯಾವ ರೀತಿ ವಾದ ಮಂಡಿಸಬೇಕೆAದು ನಿರ್ಧಾರ ತೆಗೆದುಕೊಳ್ಳುವ ಸಭೆ ನಡೆಯಲಿದೆ.
ನ್ಯಾಯಾಲಯದಲ್ಲಿ ಖುಲಾಸೆಯಾದ ಪ್ರಕರಣಗಳನ್ನು ಪರಿಶೀಲನೆ ನಡೆಸಿ ತಪ್ಪಿತಸ್ಥ ತನಿಕಾ ಅಧಿಕಾರಿಗಳ ವಿರುದ್ಧ ಕ್ರಮ
ಕೈಗೊಳ್ಳುವ ಬಗ್ಗೆಯೂ ಸಹ ಚರ್ಚೆ ನಡೆಸಲಾಗುವುದು.
ಸೈಬರ್ ಅಪರಾಧ ಮತ್ತು ಸುಗಮ ಸಂಚಾರದ ಬಗ್ಗೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಮತ್ತು ಮಾಜಿ ಮುಖ್ಯಮಂತ್ರಿಗಳ, ಶಾಸಕರ, ಮಾಜಿ ಶಾಸಕರ, ಹಾಲಿ ಮುಖ್ಯಮಂತ್ರಿಗಳ ಮತ್ತು ಹಿರಿಯ ಐ ಎ ಎಸ್, ಐ ಪಿ ಎಸ್ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕೇಸುಗಳ ಬಗ್ಗೆ ಕುಲಂಕುಶವಾಗಿ ಚರ್ಚಿಸಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಚರ್ಚೆ ನಡೆಯಲಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾ ಲೋಪವಿರೂವುದು ದೃಢಪಟಲ್ಲಿ ಇಲಾಖಾ ವಿಚಾರಣೆಗಾಗಿ ತನಿಖೆ ಬಗ್ಗೆ ವಿವರಣೆ ಪಡೆಯಲು ನೋಟಿಸ್ ನೀಡಿ ವಿವರಣೆ ಪಡೆದು ಕ್ರಮ ಕೈಗೊಳ್ಳುವ ಬಗ್ಗೆಯು ಚರ್ಚೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ನಗರದಲ್ಲಿ ಡ್ರಗ್ಸ್ ಹಾವಳಿ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚಿಸಲಿದ್ದಾರೆ.
ಈ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ದಯಾನಂದ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರುಗಳು ಹಾಗೂ ಜಂಟಿ ಪೊಲೀಸ್ ಆಯುಕ್ತ, ಸಂಚಾರ, ಸಿ ಎ ಆರ್ ಡಿ ಸಿ ಪಿ ಗಳು ಮತ್ತು ಕಾನೂನು ವ್ಯವಸ್ಥೆ ಡಿ ಸಿ ಪಿ ಗಳು ಹಾಗೂ ಸಂಚಾರಿ ಡಿ ಸಿ ಪಿ ಗಳು ಸೇರಿದಂತೆ ಒಟ್ಟು ಅಂದಾಜು ೮೦ ಜನ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.