ಚಳ್ಳಕೆರೆ: ಚಳ್ಳಕೆರೆ ಹಿಂದೂ ಮಹಾಗಣಪತಿಯ 6 ವರ್ಷದ ಗಣಪತಿ ವಿಸರ್ಜನಾ ಶೋಭಾ ಯಾತ್ರೆ ಭಕ್ತಿ ಸಡಗರ ಸಂತೋಷಕ್ಕೆ ಸಾಕ್ಷಿಯಾಯಿತು.
ನಗರದ ಸರ್ಕಾರಿ ಹಳೆ ಮಾಧ್ಯಮಿಕ ಶಾಲೆ (ಬಿಇಓ ಕಚೇರಿ)ಆವರಣದಲ್ಲಿ, ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಹಿಂದೂ ಸಂಘಟನೆಗಳ ಸಹಯೋಗ ದಲ್ಲಿ ಪ್ರತಿಷ್ಠಾಪಿಸಿ ರುವ. ಹಿಂದೂ ಮಹಾಗಣಪತಿಯ, ವಿಸರ್ಜನಾ ಶೋಭಾ ಯಾತ್ರೆ ಮೆರ ವಣಿಗೆ ಬೆಳಗ್ಗೆ 11:00 ಗಂಟೆಗೆ, ಚಿತ್ರದುರ್ಗ ರಸ್ತೆಯ ವಾಲ್ಮೀಕಿವೃತ್ತ ದಿಂದ ಆರಂಭವಾಯಿತು.
ಈ ಶೋಭಾ ಯಾತ್ರೆ ಮೆರವಣಿಗೆ ಯಲ್ಲಿ ವಿಶೇಷ ಆಕ ರ್ಷಣೆ,ನೂರಾರು ಹೆಣ್ಣು ಮಕ್ಕಳ ನೀಲಿ ಸೀರೆ ಕುಬಸ ತೊಟ್ಟ ಸಮವಸ್ತ್ರದಲ್ಲಿ, ತಲೆಗೆ ಕೇಸರಿ ಪೇಟ ಧರಿಸಿ. ಭಾಗ ವಹಿಸಿ. ಡಿಜೆ ಸಂಗೀತವಾದ್ಯಕ್ಕೆ ಲಯಬದ್ಧ ನೃತ್ಯ ಮಾಡಿ.ಗಣಪತಿಗೆಜಯ ಘೋಷಗಳನ್ನು ಮಾಡಿದರು.ಮೆರವಣಿಗೆಯು ವಾಲ್ಮೀಕಿ ವೃತ್ತ ದಿಂದ ಪ್ರಾರಂಭವಾಗಿ ಅಂಬೇಡ್ಕರ್ ವೃತ್ತದ ಮಾರ್ಗವಾಗಿ, ನಗರದ ಹೃದಯ ಭಾಗವಾದ, ನೆಹರು ವೃತ್ತ ತಲು ಪಿತು. ಮೆರವಣಿಗೆಯ ಲ್ಲಿ ಜಾನ ಪದ ವಾದ್ಯಗಳಾದ ಡೊಳ್ಳು ಕುಣಿತ, ಬೊಂಬೆ ಕುಣಿತ, ಸೇರಿದಂತೆ ಅನೇಕ ಕಲಾತಂಡಗಳು ಭಾಗವಹಿ ಸಿದ್ದರು.
ಎತ್ತ ನೋಡಿದರೂ ಶೋಭಾ ಯಾತ್ರೆಯಲ್ಲಿ ಜನಸಾಗರ ವೇ ತುಂಬಿ ತುಳುಕಾಡುತ್ತಿತ್ತು.ಚಳ್ಳಕೆರೆ ನಗರವು ಕೇಸರಿ ಬಂಟಿಂಗ್,ಪ್ಲಾಕ್ಸ್, ತಳೀರು ತೋರಣಗಳಿಂದ ಅಲಂಕಾ ರ ಗೊಂಡಿತ್ತು.ಯುವಕ ರು ಕೇಸರಿ ಶಾಲು,ಪೇಟದರಿಸಿ ಗಣೇಶ ಗಣೇಶ ಪಪ್ಪಾ ಮೋರಿಯ, ಮಂಗಳಮೂರ್ತಿ ಮೋರಿಯ ಎಂದು ಭಕ್ತಿಪರಶರಾಗಿ, ವಿನಾಯಕನಿಗೆ ಘೋಷಣೆಯನ್ನು ಕೂಗಿದರು.
ದಾರಿ ಉದ್ದಕ್ಕೂ ಶೋಭಾ ಯಾತ್ರೆಯಲ್ಲಿ ಭಾಗವಹಿಸಿ ದ.ಭಕ್ತರಿಗೆ ವರ್ತಕರು,ಹಾಗೂ ವೀರಶೈವ ಸಮಾಜದ ಸಂಘದಿಂದ ಉಚಿತ ನೀರು,ಮಜ್ಜಿಗೆ,ಉಪಹಾರ ವಿತರ ಣೆ ಮಾಡಿದರು. ನೆಹರು ವೃತ್ತದಿಂದ ಬೆಂಗಳೂರು ರಸ್ತೆ ಯ ಬಸವೇಶ್ವರ ವೃತ್ತ ಮಾರ್ಗವಾಗಿ, ಬಳ್ಳಾರಿ ರಸ್ತೆಯ ಲ್ಲಿ ಇರುವ ಚಳ್ಳಕೆರೆ ಅಮ್ಮ ದೇವಸ್ಥಾನದ ವರೆಗೆ ಶೋ ಭಾ ಯಾತ್ರೆಯ ಮೆರವಣಿಗೆ ಅದ್ದೂರಿ ಯಾಗಿ ಸಡಗರ ಸಂಭ್ರಮದಿಂದ ಜನಸಾಗರದ ಜೊತೆ ನಡೆಯಿತು.
ಈ ಮೆರವಣಿಗೆಯಲ್ಲಿ ಪೊಲೀಸರು ಶಾಂತಿ ಭದ್ರತೆ ಕಾ ಪಾಡಲು, ಚಿತ್ರದು ರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ರಂಜಿತ್ ಕುಮಾರ್ ಬಂಡಾರು ಮಾರ್ಗ ದರ್ಶನ ದಲ್ಲಿ, ಹಾಗೂ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ನೇತೃತ್ವದ ಲ್ಲಿ ಬಾರಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದ ರು.ಈ ಶೋಭಾ ಯಾತ್ರೆ ಗಣೇಶನ ವಿಸರ್ಜನೆ ಮೆರವಣಿಗೆ ಯಲ್ಲಿ ಹಿಂದೂ ಮಹಾಗಣಪತಿ ಶೋಭ ಯಾತ್ರೆ ಮೆರ ವಣಿಗೆ ಸಮಿತಿ ಅಧ್ಯಕ್ಷಪಿ.ತಿಪ್ಪೇಸ್ವಾಮಿ,
ಜಯಂತೋತ್ಸವ ಮೆರವಣಿಗೆ ಸಮಿತಿ ಅಧ್ಯಕ್ಷ ಕೆ.ಸಿ. ನಾಗರಾಜ, ಗೌರವಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಉಪಾ ಧ್ಯಕ್ಷ ಬೇಕರಿ ಮಂಜುನಾಥ್,ಉತ್ಸವ ಸಮಿತಿ ಸಲಹಾ ಸದಸ್ಯರಾದ ಕೆ.ಟಿ. ಕುಮಾರಸ್ವಾಮಿ, ಜಯಪಾಲಯ್ಯ, ಸೋಮಶೇಖರ ಮಂಡಿಮಠ, ಬಾಳೆಕಾಯಿ ರಾಮದಾಸ್, ಸೂರನ ಹಳ್ಳಿ ಶ್ರೀನಿವಾಸ್,
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯ ಕ್ಷ ಡಾ. ಮಂಜುನಾಥ್, ವಿಶ್ವ ಎಂದು ಪರಿಷತ್ ತಾಲೂ ಕು ಅಧ್ಯಕ್ಷ ಮಹಾಂತೇಶ್, ನಗರ ಘಟಕ ಅಧ್ಯಕ್ಷ ಸಿ.ಎಂ.ಯತೀಶ್, ನಗರಸಭೆ ಸದಸ್ಯರಾದ ಸಿ.ಶ್ರೀನಿವಾಸ್, ಎಸ್.ಜಯಣ್ಣ, ಪ್ರಮೋದ್, ವೆಂಕ ಟೇಶ್,ಕವಿತಾ ತಿಪ್ಪೇಸ್ವಾಮಿ, ವಿಶುಕುಮಾರ್, ಬಿಜೆಪಿ ಮುಖಂಡ ರಾದ ಎಚ್.ಎಸ್.ಮೋಹನ್, ಮಾತೃ ಶ್ರೀ ಮಂಜುನಾಥ್, ಬಿ.ಎಂ.ಶ್ರೀನಿವಾಸ್, ಅಲ್ಲಾಪುರ ಬಸವರಾಜ್, ಚಿದಾನಂದ, ಇತರ ಮುಖಂಡರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.