ಯಲಹಂಕ: ಕಳೆದ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಯಲಹಂಕದ ಕೆಲವು ಭಾಗಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪ ಹಿನ್ನಡೆಯಾಗಿತ್ತು ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಯುವಕರಿಗೆ ಮಣೆ ಹಾಕುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೆಸರಘಟ್ಟ ಬ್ಲಾಕ್ ಕಾಂಗ್ರೆಸ್ ಗೆ ನೂತನ ಸಾರಥಿಯನ್ನಾಗಿ ಯುವ ಮುಖಂಡರಾದ ಡಾ.ಎಂ ಮಂಜುನಾಥ್ ಅದ್ದೆ ಅವರನ್ನು ನೇಮಿಸಿ ಅಧಿಕೃತವಾಗಿ ಆದೇಶವನ್ನು ಹೊರಡಿಸಿದ್ದಾರೆ.
ಡಾ. ಎಂ ಮಂಜುನಾಥ್ ಅದ್ದೆ ವಿದ್ಯಾವಂತ ಉತ್ಸಾಹಿ ಯುವ ಮುಖಂಡರಾಗಿ ಗುರುತಿಸಿಕೊಂಡವರು ಹೋರಾಟದ ಹಾದಿಯನ್ನು ತುಳಿದು ಬರವಣಿಗೆಗಳ ಮೂಲಕ ಸಾಹಿತ್ಯ ರಂಗದಲ್ಲೂ ಗುರುತಿಸಿಕೊಂಡಿದ್ದ ಇವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.ಈ ಹಿಂದೆ ಅಧ್ಯಕ್ಷರಾಗಿದ್ದ ನಾಗರಾಜ್ ಗೌಡ ಅನುಭವಿ ಹಾಗೂ ಸಜ್ಜನ ರಾಜಕಾರಣಿಯಾಗಿದ್ದು ಅವರ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಧ್ಯಕ್ಷರಾದ ಜಿ ಸಿ ಚಂದ್ರಶೇಖರ್ ನನ್ನನ್ನು ನೇಮಿಸಿ ಆಶೀರ್ವಾದ ಮಾಡಿದ್ದು ಪಕ್ಷ ಸಂಘಟನೆಗೆ ವೇಗ ನೀಡಿ ಹೆಸರಘಟ್ಟ ಭಾಗದಲ್ಲಿ ಮನೆ ಮನೆಗೂ ತೆರಳಿ ಕಾರ್ಯಕರ್ತರ ಮುಖಂಡರ ಭೇಟಿ ಮಾಡಿ ಗ್ಯಾರೆಂಟಿ ಯೋಜನೆಗಳನ್ನು ಮನೆಮನೆಗೆ ತಲುಪುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.
ನುಡಿದಂತೆ ನಡೆದ ಸರ್ಕಾರ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ನೀಡುತ್ತಿರುವ ದೀನ ದಲಿತರ ಎಲ್ಲಾ ವರ್ಗದ ಬಡವರ ಪಾಲಿಗೆ ಕಾಂಗ್ರೆಸ್ ಸರ್ಕಾರ ಒಂದೇ ಆಸರೆ ಇಂತಹ ಪಕ್ಷ ದೊಡ್ಡ ಜವಾಬ್ದಾರಿಯನ್ನು ನೀಡಿದ್ದು ಅತ್ಯಂತ ಯಶಸ್ವಿಯಾಗಿ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಯಲಹಂಕ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಕೇಶವರಾಜಣ್ಣ, ಗೋಪಾಲಕೃಷ್ಣ, ಯಲಹಂಕ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಅವಲಳ್ಳಿ, ನಗರ ಅಧ್ಯಕ್ಷರಾದ ವೈ ಆರ್. ರವಿ , ದಾಸನಪುರ ಬ್ಲಾಕ್ ಅಧ್ಯಕ್ಷರಾದ ಎಚ್ ಮೂರ್ತಿ, ಮಾದನಾಯಕನಹಳ್ಳಿ ನಗರಸಭೆ ಅಧ್ಯಕ್ಷ ಕಿರಣ್ ಗೌಡ ಸೇರಿದಂತೆ ನನಗೆ ಬೆಂಬಲ ನೀಡಿದ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಮುಖಂಡರಿಗೂ ಹಿರಿಯ ನಾಯಕರಿಗೆ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.