ಬೆಂಗಳೂರು: ಕೊರಿಯರ್ನಲ್ಲಿ ಬಂದ ಹೇರ್ಡ್ರಯರ್ ಸ್ಪೋಟಗೊಂಡು ಮಹಿಳೆಯೊಬ್ಬರ ಕೈಗಳು ಛಿದ್ರವಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ.
ಬಸಮ್ಮ ಎಂಬುವರ ಕೈಗಳ ಮುಂಗೈನ ಬೆರಳು ತುಂಡಾಗಿದ್ದು,ಮನೆಯಲ್ಲಿ ರಕ್ತ ಚೆಲ್ಲಾಡಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಶಶಿಕಲಾ ಎಂಬುವರ ಹೆಸರಿಗೆ ಬಂದ ಕೊರಿಯರ್ ಅನ್ನು ಪಡೆದುಕೊಳ್ಳುವಂತೆ ದೂರದ ಊರಿನಲ್ಲಿದ್ದ ಶಶಿಕಲಾ ತನ್ನ ಗೆಳತಿ ಬಸಮ್ಮ ಅವರಿಗೆ ತಿಳಿಸಿದ್ದಾರೆ.
ಅದರಂತೆ ಕೊರಿಯರ್ ಪಾರ್ಸಲ್ ಪಡೆದ ಬಸಮ್ಮ ಹೇರ್ಡ್ರಯರ್ ಆನ್ ಮಾಡಲು ಮುಂದದಾಗ ಸ್ವಿಚ್ ಒತ್ತುತ್ತಿದ್ದಂತೆ ಡ್ರಯರ್ ಸ್ಫೋಟಗೊಂಡಿದೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೂಲಗಳ ಪ್ರಕಾರ ಶಶಿಕಲಾ ಹೇರ್ಡ್ರಯರ್ ಬುಕ್ ಮಾಡಿಲ್ಲ ಎಂದು ಹೇಳಲಾಗಿದ್ದು, ಡ್ರಯರ್ ಮೇಲೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಹೆಸರನ್ನು ನಮೂದಿಸಿದ್ದು, ಬಾಗಲಕೋಟೆಯಿಂದ ಪಾರ್ಸಲ್ ಬಂದಿದ್ದು ಹೇಗೆ ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.