ಹೇಲಿ ಮ್ಯಾಥ್ಯೂಸ್ ಅವರ ಆಲ್ ರೌಂಡ್ ಪ್ರದರ್ಶನದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವನ್ನು 47 ರನ್ ಗಳಿಂದ ಬಗ್ಗುಬಡಿದ ಮುಂಬಯಿ ಇಂಡಿಯನ್ಸ್ ತಂಡ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಶನಿವಾರದಂದು ನಡೆಯುವ ಫೈನಲ್ ಪಂದ್ಯದಲ್ಲಿ ಅದು ದಿಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಗುರುವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬಯಿ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 213 ರನ್ ಗಳನ್ನು ಕಲೆ ಹಾಕಿತು. ದೊಡ್ಡ ಮೊತ್ತವನ್ನು ಬೆಂಬತ್ತಿ ಹೊರತ ಗುಜರಾತ್ ಜೈಂಟ್ಸ್ 19.2 ಓವರ್ ಗಳಲ್ಲಿ 166 ರನ್ ಗಳಿಗೆ ಸರ್ವಪತನ ಕಂಡಿತು. ಆರಂಭಕಾರ್ತಿ ಡೇನಿಯ್ ಗಿಬ್ಸನ್(34) ಮಧ್ಯಮ ಕ್ರಮಾಂಕದಲ್ಲಿ ಫೋಬಿ ಲಿಚ್ ಫೀಲ್ಡ್(31), ಭಾರತಿ ಫುಲ್ಮಲಿ(30) ಹೊರತುಪಡಿಸಿದರೆ ಬೇರಾರೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲಿಲ್ಲ. ಮುಂಬಯಿ ಪರ ಹೇಲಿ ಮ್ಯಾಥ್ಯೂಸ್ 3 ಮತ್ತು ಅಮೇಲಿಯಾ ಕೆರ್ 2 ವಿಕೆಟ್ ಪಡೆದರು.
ಹೇಲಿ -ಬಂಟ್ ಶತಕದ ಜೊತೆಯಾಟಇದಕ್ಕೂ ಮೊದಲು ಮುಂಬಯಿ ತಂಡ ವಿಕೆಟ್ ಕೀಪರ್ ಯಶ್ತಿಕಾ ಭಾಟಿಯಾ(15) ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡರೂ ಹೇಲಿ ಮ್ಯಾಥ್ಯೂಸ್ ಮತ್ತು ನಾಟ್ ಸಿವಿರ್ ಬ್ರಂಟ್ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು.