ಮಾಲೂರು: ಹಾಲು ಉತ್ಪಾದಕ ಸಹಕಾರ ಸಂಘಗಳು ಹೈನುಗಾರರ ರೈತರ ಜೀವನಾಡಿ ಯಾಗಿದೆ ಎಂದು ಶಾಸಕ ಕೆ ವೈ ನಂಜೇಗೌಡ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕಕೊಂತೂರು ಹಾಲು ಉತ್ಪಾದಕ ಸಹಕಾರ ಸಂಘದ 2023- 24ನೇ ಸಾಲಿನ ವಾರ್ಷಿಕ ಮಹಾ ಸಾಮಾನ್ಯ ಸಭೆಯನ್ನು ದೀಪ ಬೆಳಗು ಮೂಲಕ ಉದ್ಘಾಟಸಿ ಮಾತನಾಡಿದರು.
ಚಿಕ್ಕ ಕುಂತೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಒಂದು ವಿಶೇಷವಾದ ಇತಿಹಾಸವಿದ್ದು ಅದರಂತೆ ಉಳಿತಾಯವು ಹೆಚ್ಚಾಗಿದ್ದು, ಒಳ್ಳೆಯ ರೀತಿಯಲ್ಲಿ ಸಂಘವನ್ನು ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಒಕ್ಕೂಟ ಹಾಗೂ ಸರ್ಕಾರದಿಂದ ಹೈನುಗಾರಿಕೆ ರೈತರಿಗೆ ಹಲವಾರು ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತಿದ್ದು ಹಾಲು ಉತ್ಪಾದಕ ರೈತರ ಹಸು ಮರಣ ಹೊಂದಿದರೆ ಎಪ್ಪತ್ತು ಸಾವಿರ ವಿಮೆ ನೀಡಲಾಗುತ್ತದೆ,
ಹಸಿರು ಮೇವಿನ ಬಿತ್ತನೆ ಬೀಜಗಳ ವಿತರಣೆ ಹಸುಗಳಿಗೆ ಮ್ಯಾಟ್ ಶಾಪ್ ಕಟರ್ ಹಾಲು ಕರೆಯುವ ಯಂತ್ರ, ಬಾಡಿಗೆಯಲ್ಲಿ ನಡೆಯುತ್ತಿರುವ ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಾಣಗಳಿಗೆ ಸಹಕಾರ, ನಿವೃತ್ತಿ ಹೊಂದಿದ ಕಾರ್ಯದರ್ಶಿಗಳು ಮುತ್ತು ಸಿಬ್ಬಂದಿಗೆ ನಿವೃತ್ತಿ ವೇತನ, ಹೈನುಗಾರಿಕಾ ರೈತರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹ ಧನ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದ್ದು 100% ಬಿ ಎಂ ಸಿ ಕೇಂದ್ರಗಳ ಸ್ಥಾಪನೆ,
ಐಸ್ ಕ್ರೀಮ್ ಪ್ಲಾಂಟ್, ಸೋಲಾರ್ ಪ್ಲಾಂಟ್ ಸ್ಥಾಪನೆ ಮಾಡಿ ಹಲವಾರು ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲೆಯ ಪ್ರತ್ಯೇಕ ಕೇಂದ್ರವಾಗಲಿದ್ದು ಆಗಲೂ ಸಹ ಕೋಲಾರ ಜಿಲ್ಲೆಯಲ್ಲಿ ಅತ್ಯಧಿಕವಾದ ಹಾಲನ್ನು ಪೂರೈಸಿ ಜಿಲ್ಲೆಯನ್ನು ಮಾದರಿಯನ್ನಾಗಿಸಲಾಗುವುದು,ಎಲ್ಲಾ ಹಾಲು ಉತ್ಪಾದಕ ಸಹಕಾರಿ ಸಂಘಗಳಲ್ಲಿ ಕಾಮನ್ ಸಾಫ್ಟ್ ವೇರ್ ಅಳವಡಿಸಿದ್ರೆ ಹಾಕುವ ಹಾಲಿನ ಗುಣಮಟ್ಟವನ್ನು ಹೆಚ್ಚಿಸಬಹುದು ಪ್ರಸ್ತುತ ಕೆಲವರು ಹಾಕುವ ಹಾಲಿನಲ್ಲಿ ನೀರು ಬೆರಿಕಿ ಹಾಕುತ್ತಿರುವುದ ರಿಂದ ಗುಣಮಟ್ಟದ ಹಾಲು ಪೂರೈಕೆ ಮಾಡಲು ಆಗುತಿಲ್ಲ ಅದರಿಂದ ಒಕ್ಕೂಟ ಕಾಮನ್ ಸಾಫ್ಟ್ ವೇರ್ ಅಳವಡಿಸಲು ಮುಂದಾಗಿದೆ ಎಂದರು. ಶಿಬಿರ ಕಚೇರಿಯ ವಿಸ್ತರಣಾಧಿಕಾರಿ ಉಲ್ಲೂರಪ್ಪ ಸಭೆಯಲ್ಲಿ 2023 -24ನೆಯ ಸಾಲಿನ ವರದಿಯನ್ನು ಓದಿ ಸಭೆಯಲ್ಲಿ ಮಂಡಿಸಿದರು.
ಈ ಸಂದರ್ಭದಲ್ಲಿ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಲೋಹಿತ್, ವಿಸ್ತರಣಾಧಿಕಾರಿ ಗಂಗಾಧರ್ ಗ್ರಾ ಫಂ ಅಧ್ಯಕ್ಷೆ ಸಾವಿತ್ರಮ್ಮ, ಮಾಜಿ ಜಿ.ಪo. ಸದಸ್ಯರಾದ ಗೋಪಾಲ್ ರೆಡ್ಡಿ, ಪಾನಿಪುರಿ ಹನುಮಂತಪ್ಪ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎ ವಿ ರೆಡ್ಡಿ, ಉಪಾಧ್ಯಕ್ಷ ಅಪ್ಪೋಜಪ್ಪ, ನಿರ್ದೇಶಕರಾದ ವಿ ವೆಂಕಟಸ್ವಾಮಿ, ಎಂ ವೆಂಕಟಸ್ವಾಮಿ ಪಿ ಕೃಷ್ಣಪ್ಪ ಪಿ ನಾರಾಯಣಪ್ಪ ವೆಂಕಟೇಶಪ್ಪ ಆಂಜನಪ್ಪ ವೆಂಕಟಮ್ಮ ಮುಖಂಡರಾದ ನಿದರ ಮಂಗಲ ವೆಂಕಟಸ್ವಾಮಿ, ಭುವನಹಳ್ಳಿ ಅಬಯಪ್ಪ, ಸಿಬ್ಬಂದಿ ನಾಗರಾಜ್ ಸುಬ್ರಮಣಿ ಶ್ರೀಕಾಂತ್ ಉಪಸ್ಥಿತರಿದ್ದರು.